Assembly Polls: ಬಳ್ಳಾರಿಯಲ್ಲಿ ಯಾರೇ ಸ್ಪರ್ಧಿಸಿದರೂ ನಾನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ: ಜಿ ಸೋಮಶೇಖರ್ ರೆಡ್ಡಿ

Assembly Polls: ಬಳ್ಳಾರಿಯಲ್ಲಿ ಯಾರೇ ಸ್ಪರ್ಧಿಸಿದರೂ ನಾನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ: ಜಿ ಸೋಮಶೇಖರ್ ರೆಡ್ಡಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 02, 2023 | 12:35 PM

ಮುಂಬರುವ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಜನಾರ್ಧನ ರೆಡ್ಡಿ ಅವರು ತಮ್ಮ ಪತ್ನಿ ಅರುಣ ಲಕ್ಷ್ಮಿಯವರನ್ನು ಸಹೋದರ ಸೋಮಶೇಖರ ರೆಡ್ಡಿ ವಿರುದ್ಧ ಕಣಕ್ಕಿಳಿಸುತ್ತಿದ್ದಾರೆ.

ಬಳ್ಳಾರಿಯ ದೊಡ್ಡ ಶಕ್ತಿಯೆನಿಸಿಕೊಂಡಿದ್ದ ಗಾಲಿ ರೆಡ್ಡಿಗಳ ಕುಟುಂಬ ನಿಸ್ಸಂಶಯವಾಗಿ ದುರ್ಬಲಗೊಂಡಿದೆ. ಹಿಂದೆ ರೆಡ್ಡಿಗಳು ಬಿ ಎಸ್ ಆರ್ ಪಕ್ಷ ಸ್ಥಾಪಿಸಿದ್ದಾಗ ಇನ್ನೊಬ್ಬ ಸಹೋದರ ಕರುಣಾಕರ ರೆಡ್ಡಿ ಬಿಜೆಪಿ ಬಿಟ್ಟು ಬಂದಿರಲಿಲ್ಲ. ನಂತರ ದಿನಗಳಲ್ಲಿ ಸೋಮಶೇಖರ ರೆಡ್ಡಿ ಪುನಃ ಬಿಜೆಪಿಗೆ ಹೋದಾಗ ಅಕ್ರಮ ಗಣಿಗಾರಿಕೆ ಪ್ರಕಾರಣದಲ್ಲಿ ಜೈಲು ಸೇರಿದ್ದ ಗಾಲಿ ಜನಾರ್ಧನ ರೆಡ್ಡಿ ಒಂಟಿಯಾದರು. ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವಂತಿಲ್ಲ ಅಂತ ಮೇಲಿಂದ ಫರ್ಮಾನು ಜಾರಿಯಾಗಿದೆ. ಹಾಗಾಗೇ, ಜನಾರ್ಧನ ರೆಡ್ಡಿ ತಮ್ಮದೇ ಅದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿ ಸಹೋದರರನ್ನು ಸೇರುವಂತೆ ಆಹ್ವಾನಿಸಿದರಾದರೂ ಯಾರು ಅವರ ಜೊತೆ ಸೇರಲಿಲ್ಲ. ಮುಂಬರುವ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಜನಾರ್ಧನ ರೆಡ್ಡಿ ಅವರು ತಮ್ಮ ಪತ್ನಿ ಅರುಣ ಲಕ್ಷ್ಮಿಯವರನ್ನು ಸಹೋದರ ಸೋಮಶೇಖರ ರೆಡ್ಡಿ ವಿರುದ್ಧ ಕಣಕ್ಕಿಳಿಸುತ್ತಿದ್ದಾರೆ. ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಪ್ರತಿಕ್ರಿಯಿಸಿದ್ದನ್ನು ವಿಡಿಯೋದಲ್ಲಿ ಕೇಳಬಹುದು.

ಮತ್ತಷ್ಟು ವಿಡಿಯೋ ಸುದ್ದಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Feb 02, 2023 12:34 PM