Ballari: ಹಳೇ ದೋಸ್ತಿಗಳು ಬಿ ಶ್ರೀರಾಮುಲು ಮತ್ತು ಸಂತೋಷ್ ಲಾಡ್ ಸಂಡೂರು ಜಾತ್ರೆಯಲ್ಲಿ ಭೇಟಿಯಾದಾಗ ಹೇಗೆ ವರ್ತಿಸಿದರು ಗೊತ್ತಾ?
ಶ್ರೀರಾಮುಲು ಮತ್ತು ಸಂತೋಷ್ ಬಹಳ ದಿನಗಳ ನಂತರ ಭೇಟಿಯಾಗಿದ್ದಾರೆ. ಪರಸ್ಪರ ಎದುರಾದಾಗ ಆತ್ಮೀಯತೆಯಿಂದ ಆಲಂಗಿಸಿಕೊಂಡು ಹರ್ಷ ವ್ಯಕ್ತಪಡಿಸುತ್ತಾ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ.
ಬಳ್ಳಾರಿ: ನಾವು ಆಗಾಗ ಇದನ್ನು ಹೇಳುತ್ತಿರುತ್ತೇವೆ. ರಾಜಕಾರಣಿಗಳು ಬೇರೆ ಬೇರೆ ಪಕ್ಷಗಳನ್ನು ಪ್ರತಿನಿಧಿಸಿದರೂ ಅವರ ನಡುವೆ ಸ್ನೇಹವಿರುತ್ತದೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಬಿಎಸ್ ಯಡಿಯೂರಪ್ಪ ರಾಜಕೀಯವಾಗಿ ಬದ್ಧ ವೈರಿಗಳಾದರೂ ಅವರ ನಡುವೆ ನಮ್ಮಲ್ಲಿ ಸೋಜಿಗ ಹುಟ್ಟುವಷ್ಟು ಆತ್ಮೀಯತೆ ಇದೆ. ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಸಂತೋಷ್ ಲಾಡ್ (Santosh S Lad ) ಮತ್ತು ಬಸವರಾಜ ಬೊಮ್ಮಾಯಿ ಸಂಪುಟಟದಲ್ಲಿ ಸಾರಿಗೆ ಸಚಿವರಾಗಿರುವ ಬಿ ಶ್ರೀರಾಮುಲು (B Sriramulu) ನಡುವೆಯೂ ಗಾಢವಾದ ಸ್ನೇಹವಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿರುವ ಬನ್ನಿಹಟ್ಟಿ ಜಾತ್ರೆಯಲ್ಲಿ ಇವರಿಬ್ಬರು ಬಹಳ ದಿನಗಳ ನಂತರ ಭೇಟಿಯಾಗಿದ್ದಾರೆ. ಪರಸ್ಪರ ಎದುರಾದಾಗ ಆತ್ಮೀಯತೆಯಿಂದ ಆಲಂಗಿಸಿಕೊಂಡು ಹರ್ಷ ವ್ಯಕ್ತಪಡಿಸುತ್ತಾ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos