ಭೀಕರ ದಾಳಿಗೆ ಛಿದ್ರ ಛಿದ್ರವಾಗಿ ಹಾರಿದ ಪಾಕ್ ಸೈನಿಕರ ಮೃತದೇಹ: ವಿಡಿಯೋ ನೋಡಿ

Updated on: May 08, 2025 | 8:05 AM

ಒಂದೆಡೆ ಭಾರತದ ಆಪರೇಷನ್ ಸಿಂದೂರ್ ಪ್ರತಿದಾಳಿಯಿಂದ ಬೆಚ್ಚಿಬಿದ್ದಿರುವ ಪಾಕಿಸ್ತಾನಕ್ಕೆ ಮತ್ತೊಂದೆಡೆ, ಬಲೂಚ್ ಲಿಬರೇಷನ್ ಆರ್ಮಿ ಪ್ರತಿರೋಧದ ಬಿಸಿ ಮುಟ್ಟಿಸುತ್ತಿದೆ. ಬಲೂಚಿಸ್ತಾನ ಆರ್ಮಿ ನಡೆಸಿದ ಐಇಡಿ ದಾಳಿಯ ಪರಿಣಾಮ ಪಾಕಿಸ್ತಾನದ 12 ಯೋಧರು ಮೃತಪಟ್ಟಿದ್ದು, ಅವರ ದೇಹಗಳು ಛಿದ್ರಛಿದ್ರವಾಗಿ ಹಾರಿರುವ ವಿಡಿಯೋವನ್ನು ಬಿಎಲ್​​​ಎ ಹಂಚಿಕೊಂಡಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಂತರ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಸಂಘರ್ಷದ ವಾತಾವರಣವಿದೆ. ಇಂಥ ಸಂದರ್ಭದಲ್ಲೇ ಅತ್ತ ಪಾಕಿಸ್ತಾನದ ನೈಋತ್ಯ ಪ್ರಾಂತ್ಯದ ಬಲೂಚಿಸ್ತಾನದ ಕಚ್ಚಿ ಜಿಲ್ಲೆಯ ಮಾಚ್ ಪ್ರದೇಶದಲ್ಲಿ ಬಲೂಚ್ ಲಿಬರೇಷನ್ ಆರ್ಮಿಯು ಪಾಕಿಸ್ತಾನ ಸೇನೆಯ ಯೋಧರು ಸಂಚರಿಸುತ್ತಿದ್ದ ವಾಹನವನ್ನು ಐಇಡಿ ಬಳಸಿ ಸ್ಫೋಟಿಸಿ 12 ಸೈನಿಕರ ಹತ್ಯೆ ಮಾಡಿದೆ. ಪಾಕಿಸ್ತಾನ ಸೈನಿಕರು ಸ್ಫೋಟದಲ್ಲಿ ಮೃತಪಟ್ಟು, ಅವರ ದೇಹಗಳು ಛಿದ್ರವಾಗಿ ಹಾರಾಡಿರುವ ವಿಡಿಯೋವನ್ನು ಬಲೂಚ್ ಲಿಬರೇಷನ್ ಆರ್ಮಿ ಬಿಡುಗಡೆ ಮಾಡಿದೆ. ಆ ವಿಡಿಯೋ ಇಲ್ಲಿದೆ.

ವಿವರಗಳಿಗೆ ಓದಿ: ಭಾರತ ಉಗ್ರರ ಟಾರ್ಗೆಟ್ ಮಾಡಿದ್ರೆ ಪಾಕಿಸ್ತಾನ ಸೇನೆ ಮೇಲೆಯೇ ದಾಳಿ ನಡೆಸಿದ ಬಲೂಚ್ ಆರ್ಮಿ: 12 ಪಾಕ್ ಸೈನಿಕರು ಸಾವು

Published on: May 08, 2025 07:56 AM
Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More