ಅಯ್ಯೋ ದೇವ್ರೆ ಭಾರತ ಗೆದ್ದಿದೆ: ಇಂಡಿಯಾದ ಗೆಲ್ಲುವನ್ನು ಸಂಭ್ರಮಿಸಿದ ಬಲೂಚಿಸ್ತಾನ
ಕೊಲಂಬೊದಲ್ಲಿ ನಡೆದ ಭಾರತ-ಪಾಕ್ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿತು. ಈ ಗೆಲುವನ್ನು ಭಾರತದಲ್ಲಿ ಮಾತ್ರವಲ್ಲದೆ, ಬಲೂಚಿಸ್ತಾನದ ವಿವಿಧ ಭಾಗಗಳಲ್ಲಿ ಅಲ್ಲಿನ ಜನರು ಪಟಾಕಿ ಸಿಡಿಸಿ, ಭಾರತದ ಧ್ವಜ ಹಿಡಿದು ಸಂಭ್ರಮಿಸಿದ್ದಾರೆ. ಇದು ಕೇವಲ ಆಟವಲ್ಲ, ತಮ್ಮ ಭಾವನೆಗಳ ಪ್ರತಿಬಿಂಬ ಎಂದು ಬಲೂಚ್ ಯುವಕರು ವ್ಯಕ್ತಪಡಿಸಿದ್ದಾರೆ. ಈ ಸಂಭ್ರಮದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ.
ಕೊಲಂಬೊದಲ್ಲಿ ನಡೆದ ಭಾರತ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 175 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವು ಕೇವಲ 114 ರನ್ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನವನ್ನು ರುಬ್ಬುತ್ತಿದ್ದಾರೆ. ಇಂಡಿಯಾ ಗೆದ್ದರೆ ಭಾರತ ಸಂಭ್ರಮಿಸಿಬೇಕಿತ್ತು. ಆದರೆ ಈ ಸಂಭ್ರಮ ಗಡಿಯಾಚೆಗೆ ಇದೆ. ಬಲೂಚಿಸ್ತಾನದ ವಿವಿಧ ಭಾಗಗಳಲ್ಲಿ ಭಾರತದ ಗೆಲ್ಲುವನ್ನು ಸಂಭ್ರಮಿಸಿದ್ದಾರೆ. ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಭಾರತದ ಪ್ರತಿಯೊಂದು ವಿಕೆಟ್ ಪತನ ಮತ್ತು ಬೌಂಡರಿಗಳಿಗೆ ಅಲ್ಲಿನ ಜನರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. “ಇದು ಕೇವಲ ಆಟವಲ್ಲ, ನಮ್ಮ ಭಾವನೆಗಳ ಪ್ರತಿಬಿಂಬ” ಎಂಬಂತೆ ಬಲೂಚ್ ಯುವಕರು ಭಾರತದ ಧ್ವಜ ಹಿಡಿದು ಸಂಭ್ರಮಿಸುತ್ತಿರುವ ವಿಡಿಯೋಗಳು ವೈರಲ್ ಆಗಿವೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

