AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಡಿಗೆ ಹೋಗೋ ಮುನ್ನ ಇವ್ರಿಗೆ ‘ನಾಗರಿಕ ಪ್ರಜ್ಞೆ’ ಇರಲಿಲ್ವಾ?: ಬಂಡೀಪುರದಲ್ಲಿ ಚಲಿಸುವ ಕಾರಿಂದ ಬಿಯರ್ ಕ್ಯಾನ್, ಟಿಶ್ಯೂ ಎಸೆದ ಪ್ರವಾಸಿಗರು

ಕಾಡಿಗೆ ಹೋಗೋ ಮುನ್ನ ಇವ್ರಿಗೆ ‘ನಾಗರಿಕ ಪ್ರಜ್ಞೆ’ ಇರಲಿಲ್ವಾ?: ಬಂಡೀಪುರದಲ್ಲಿ ಚಲಿಸುವ ಕಾರಿಂದ ಬಿಯರ್ ಕ್ಯಾನ್, ಟಿಶ್ಯೂ ಎಸೆದ ಪ್ರವಾಸಿಗರು

ಅಕ್ಷಯ್​ ಪಲ್ಲಮಜಲು​​
|

Updated on: May 27, 2026 | 12:43 PM

Share

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರವಾಸಿಗರೊಬ್ಬರು ಬಿಯರ್ ಕ್ಯಾನ್‌ಗಳು ಹಾಗೂ ಟಿಶ್ಯೂ ಪೇಪರ್‌ಗಳನ್ನು ರಸ್ತೆಗೆ ಎಸೆಯುವ ಮೂಲಕ ಪರಿಸರ ಮಾಲಿನ್ಯ ಮಾಡಿದ್ದಾರೆ. ಈ ಬೇಜವಾಬ್ದಾರಿ ಕೃತ್ಯವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡ ನಂತರ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆ ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರ ಗಮನಕ್ಕೆ ಬಂದಿದ್ದು, ಪ್ರವಾಸಿಗರ ಸ್ವಚ್ಛತಾ ಪ್ರಜ್ಞೆಯ ಕೊರತೆ ಎತ್ತಿ ತೋರಿಸುತ್ತದೆ. ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಅಗತ್ಯ.

ಚಾಮರಾಜನಗರ, ಮೇ,27: ಕಾಡಿನ ನಡುವೆ ಪ್ರಾಣಿಗಳ ವಾಸಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗರು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಕನಿಷ್ಠ ಜ್ಞಾನವನ್ನೂ ಮರೆತು ವರ್ತಿಸುತ್ತಿರುವ ಆಘಾತಕಾರಿ ಘಟನೆಯೊಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ (Bandipur Tiger Reserve) ಬೆಳಕಿಗೆ ಬಂದಿದೆ. ಸುಂದರ ಕಾಡಿನ ರಸ್ತೆಯಲ್ಲೇ ಚಲಿಸುತ್ತಿದ್ದ ಬಲೆನೊ ಕಾರೊಂದರಿಂದ ಪ್ರವಾಸಿಗರು ಬಿಯರ್ ಕ್ಯಾನ್‌ಗಳು ಹಾಗೂ ಬಳಸಿದ ಟಿಶ್ಯೂ ಪೇಪರ್‌ಗಳನ್ನು ರಸ್ತೆಗೆ ಎಸೆಯುವ ಮೂಲಕ ಪರಿಸರ ಮಾಲಿನ್ಯ (Littering) ಮಾಡಿದ್ದು, ಈ ಕುರಿತಾದ ಎಕ್ಸ್ (X) ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಪ್ರಮುಖ ರಸ್ತೆಯಲ್ಲಿ ಸಾಗುತ್ತಿದ್ದ ಮಾರುತಿ ಸುಜುಕಿ ಬಲೆನೊ ಕಾರಿನಲ್ಲಿದ್ದ ಪ್ರವಾಸಿಗರು ತಾವು ಕುಡಿದ 2 ಬಿಯರ್ ಕ್ಯಾನ್‌ಗಳು ಹಾಗೂ ಬಳಸಿದ ಟಿಶ್ಯೂ ಪೇಪರ್‌ಗಳನ್ನು ಕಾರಿನ ಕಿಟಕಿಯಿಂದ ಹೊರಗೆ ಎಸೆದಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ತಕ್ಷಣವೇ ಈ ಬೇಜವಾಬ್ದಾರಿ ಕೃತ್ಯವನ್ನು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshay Pallamajalu
Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More