ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ IT ಕಂಪನಿ ರಿಜೆಕ್ಟ್​ ಮಾಡ್ತಿವೆ: ಅಳಲು ತೋಡಿಕೊಂಡ ಯುವತಿ; ವಿಡಿಯೋ ವೈರಲ್​

Edited By:

Updated on: Oct 24, 2026 | 3:25 PM

ಮುಖ್ಯಾಂಶಗಳು

  • ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ IT ಕಂಪನಿ ರಿಜೆಕ್ಟ್​ ಮಾಡ್ತಿವೆ
  • ರೆಸ್ಯೂಮ್​​ನಲ್ಲಿ ತೆಲುಗು & ತಮಿಳಿಗರಿಗೆ ಹೆಚ್ಚಿನ ಮಾನ್ಯತೆ
  • ವಿಡಿಯೋ ಮಾಡಿ ಅಳಲು ತೋಡಿಕೊಂಡ ಯುವತಿ

ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಮಾತೃಭಾಷೆ ಕನ್ನಡವೆಂದು ನಮೂದಿಸಿದವರಿಗೆ ಉದ್ಯೋಗ ನಿರಾಕರಿಸಲಾಗುತ್ತಿದೆ ಎಂಬ ಯುವತಿಯೊಬ್ಬಳ ವಿಡಿಯೋ ವೈರಲ್ ಆಗಿದೆ. ಕನ್ನಡಿಗರಿಗೆ ಆಗುತ್ತಿರುವ ಈ ಅನ್ಯಾಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವರು ಧ್ವನಿ ಎತ್ತಿದ್ದು, ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್​​ 24: ‘ಐಟಿ ಕಂಪನಿಗಳು ತೆಲುಗು ಮತ್ತು ತಮಿಳಿಗರಿಗೆ ಹೆಚ್ಚಿನ ಮಾನ್ಯತೆ ನೀಡುತ್ತಿದ್ದು, ರೆಸ್ಯೂಮ್​​ನಲ್ಲಿ ಕನ್ನಡ ಇದ್ದರೆ ರಿಜೆಕ್ಟ್​ ಮಾಡುತ್ತಿವೆ’ ಎಂದು ಓರ್ವ ಯುವತಿ ಅಳಲು ತೋಡಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ. ‘ಬೆಂಗಳೂರಿನ ಕಾಲೇಜುಗಳಲ್ಲಿ ಕ್ಯಾಂಪಸ್​​ ಇಂಟರ್​ವ್ಯೂವ್​​ ಕಂಡಕ್ಟ್​ ಮಾಡುತ್ತಿಲ್ಲ. ರೆಸ್ಯೂಮ್​​ನಲ್ಲಿ ಕನ್ನಡ ಇದ್ದರೆ ಕೆಲಸಕ್ಕೆ ತೆಗೆದುಕೊಳ್ಳಲ್ಲ. ಕಡಿಮೆ ಸಂಬಳಕ್ಕೆ ಬೇರೆ ಕಡೆಯಿಂದ ಕರೆತರ್ತಾರೆ. ಇದರಿಂದ ನಮಗೆ ಅವಕಾಶಗಳು ಸಿಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರಕೊಡಿ’ ಎಂದು ಸಿಎಂ ಡಿಕೆ ಶಿವಕುಮಾರ್​ಗೆ ಯುವತಿ ಮನವಿ ಮಾಡಿದ್ದಾಳೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More