ರೀಲ್ಸ್​ ಹುಚ್ಚಿಗೆ ಬಿದ್ದ ಯುವಕರ ಪುಂಡಾಟ: ಕೈಯಲ್ಲಿ ಲಾಂಗ್ ಹಿಡಿದು ಡ್ಯಾನ್ಸ್

| Updated By: ಗಂಗಾಧರ​ ಬ. ಸಾಬೋಜಿ

Updated on: Dec 20, 2023 | 7:02 PM

ರೀಲ್ಸ್​ ಹುಚ್ಚಿಗೆ ಬಿದ್ದ ಮೂವರು ಯುವಕರು ಪುಂಡಾಟ ಮೆರೆದಿದ್ದಾರೆ. ನಗರದ ಈಜಿಪುರ ಭಾಗದಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಕೈಯಲ್ಲಿ ಲಾಂಗ್ ಹಿಡಿದು ಡ್ಯಾನ್ಸ್ ಮಾಡಿರುವ ಮೂವರು ಯುವಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಂಗಳೂರು, ಡಿಸೆಂಬರ್​ 20: ಸಾಮಾಜಿಕ ಜಾಲತಾಣಕ್ಕೆ ಮಾರು ಹೋಗಿರುವ ಬಹುತೇಕರು ಫಾಲೋವರ್ಸ್​, ಲೈಕ್ಸ್​ ಮತ್ತು ಶೇರ್​ ಮೂಲಕ ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಳ್ಳಲು ಏನೇನೋ ಕಸರತ್ತು ಮಾಡುತ್ತಾರೆ. ಅದೇ ರೀತಿಯಾಗಿ ರೀಲ್ಸ್ (reels)​ ಹುಚ್ಚಿಗೆ ಬಿದ್ದ ಮೂವರು ಯುವಕರು ಪುಂಡಾಟ ಮೆರೆದಿದ್ದಾರೆ. ನಗರದ ಈಜಿಪುರ ಭಾಗದಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಕೈಯಲ್ಲಿ ಲಾಂಗ್ ಹಿಡಿದು ಡ್ಯಾನ್ಸ್ ಮಾಡಿರುವ ಮೂವರು ಯುವಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.