ಇಂದಿನಿಂದ ಎಟಿಎಂಗಳಲ್ಲಿ ನಡೆಸುವ ನಗದು ವಹಿವಾಟುಗಳಿಗೆ ಹೆಚ್ಚು ಸೇವಾಶುಲ್ಕ, ₹ 21ರ ಬದಲು ₹ 23 ತೆರಬೇಕು!

ಅರುಣ್​ ಕುಮಾರ್​ ಬೆಳ್ಳಿ

Updated on: May 01, 2025 | 12:12 PM

ರೇಲ್ವೇ ಇಲಾಖೆಯೂ ಕೆಲ ಮಾರ್ಪಾಟುಗಳನ್ನು ಮಾಡಿದೆ. ಟಿಕೆಟ್ ಬುಕ್ ಮಾಡುವಾಗ ವೇಟಿಂಗ್ ಲಿಸ್ಟ್ ನಲ್ಲಿ ಹೆಸರು ದಾಖಲಾದರೆ, ಆ ಟಿಕೆಟ್ ಹಿಡಿದು ಸ್ಲೀಪ್ ಕ್ಲಾಸ್​ ಬೋಗಿ ಪ್ರವೇಶಿಸುವಂತಿಲ್ಲ, ಜನರಲ್ ಕಂಪಾರ್ಟ್​ಮೆಂಟ್​ನಲ್ಲಿ ಪ್ರಯಾಣಿಸಬಹುದು. ಹಾಗೆಯೇ, ಅಡ್ವಾನ್ಸ್ ಬುಕ್ಕಿಂಗ್ ಅವಧಿಯನ್ನು ಮೊದಲಿದ್ದ 4 ತಿಂಗಳಿಗೆ ಬದಲು ಎರಡು ತಿಂಗಳಿಗೆ ಇಳಿಸಲಾಗಿದೆ.

ಬೆಂಗಳೂರು, ಮೇ 1: ಕೆಲವರಿಗೆ ಅದು ಅಭ್ಯಾಸ. ದುಡ್ಡನ್ನು ವ್ಯಾಲೆಟ್​ಗಳಲ್ಲಿ ಹೊತ್ತುಕೊಂಡು ತಿರುಗುವ ಬದಲು ಬ್ಯಾಂಕಲ್ಲಿ ಇಡೋದು ಲೇಸು ಅಂತ ಭಾವಿಸಿ ಹಣವನ್ನು ಅಲ್ಲೇ ಉಳಿಸಿ ದಿನದ ಖರ್ಚಿಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಎಟಿಎಂ ಗೆ (ATM kiosks) ಹೋಗಿ ವಿತ್​ಡ್ರಾ ಮಾಡುತ್ತಾರೆ. ಡಿಜಿಟಲ್ ಪೇಮೆಂಟ್​​ಗಳು ಶುರುವಾದ ಮೇಲೆ ಎಟಿಎಂಗೆ ಹೋಗೋದು ಕಮ್ಮಿಯಾಗಿದೆ ಅನ್ನೋದು ಬೇರೆ ವಿಚಾರ. ಆದರೆ ಗಳಿಗೆಗೊಮ್ಮೆ ಎಟಿಎಂಗೆ ಹೋಗುವವರು ಇವತ್ತಿನಿಂದ ತಮ್ಮ ಪ್ರವೃತ್ತಿಯನ್ನು ಬದಲಾಯಿಸಬೇಕಾಗಬಹುದು. ಆರ್​​ಬಿಐ ನಿರ್ದೇಶನದ ಪ್ರಕಾರ ಮೂರು ಉಚಿತ ಎಟಿಎಂ ವಹಿವಾಟಿನ ನಂತರ ನಡೆಸುವ ಪ್ರತಿ ನಗದು ವಹಿವಾಟಿಗೆ ರೂ 23 ಸೇವಾ ಶುಲ್ಕವನ್ನು ಬ್ಯಾಂಕ್ ಗಳು ವಿಧಿಸಲಿವೆ. ಮೊದಲಾದರೆ ರೂ. 21 ಸೇವಾ ಶುಲ್ಕವನ್ನು ಬ್ಯಾಂಕ್​ಗಳು ಗ್ರಾಹಕರ ಮೇಲೆ ವಿಧಿಸುತ್ತಿದ್ದವು.

ಇದನ್ನೂ ಓದಿ: ಎಟಿಎಂನಲ್ಲಿ ಬ್ಯಾಲನ್ಸ್ ಪರಿಶೀಲಿಸಿದರೂ ಶುಲ್ಕವೇ; ಮೇ 1ರಿಂದ ಇಂಟರ್​​ಚೇಂಜ್ ಫೀಸ್ ಹೆಚ್ಚಳ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.