Maharashtra Plane Crash: ಡಿಸಿಎಂ ಅಜಿತ್ ಪವಾರ್ ಸಾವು: ವಿಮಾನ ಪತನವಾದ ಸ್ಥಳ ಹೇಗಿದೆ ನೋಡಿ

Updated on: Jan 28, 2026 | 10:35 AM

ಮಹಾರಾಷ್ಟ್ರದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಜನವರಿ 28, 2026 ರಂದು ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ರನ್‌ವೇ ಮೇಲೆ ಅಪ್ಪಳಿಸಿದ ತಕ್ಷಣ ವಿಮಾನದಲ್ಲಿ ದೊಡ್ಡ ಸ್ಫೋಟ ಸಂಭವಿಸಿತು, ಬಹುತೇಕ ಭಾಗ ಸುಟ್ಟು ಕರಕಲಾಯಿತು. ಪ್ರಸ್ತುತ ಎನ್‌ಡಿಆರ್‌ಎಫ್ ತಂಡಗಳು ಮೃತದೇಹಗಳನ್ನು ಹೊರತೆಗೆಯುವ ಕಾರ್ಯದಲ್ಲಿ ನಿರತವಾಗಿವೆ. ಇದು ಮಹಾರಾಷ್ಟ್ರ ಕಂಡ ಭೀಕರ ವಿಮಾನ ದುರಂತ.

ಮಹಾರಾಷ್ಟ್ರದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ (ಜನವರಿ 28) ಸಂಭವಿಸಿದ ಭೀಕರ ವಿಮಾನ ಅಪಘಾತದ ಸ್ಥಳವು ಅತ್ಯಂತ ಭೀಕರವಾಗಿದೆ. ನ್‌ವೇ ಮೇಲೆ ಅಪ್ಪಳಿಸಿದ ತಕ್ಷಣ ವಿಮಾನದಲ್ಲಿ ದೊಡ್ಡ ಮಟ್ಟದ ಸ್ಫೋಟ ಸಂಭವಿಸಿದ್ದರಿಂದ, ವಿಮಾನದ ಬಹುತೇಕ ಭಾಗ ಸುಟ್ಟು ಕರಕಲಾಗಿದೆ. ಕೇವಲ ವಿಮಾನದ ಬಾಲದ ಭಾಗ ಮತ್ತು ರೆಕ್ಕೆಗಳ ಕೆಲವು ಅವಶೇಷಗಳು ಮಾತ್ರ ಗುರುತಿಸಲು ಸಾಧ್ಯವಾಗುವಂತೆ ಉಳಿದಿವೆ. ವಿಮಾನ ಪತನವಾದ ರಭಸಕ್ಕೆ ಅದರ ಬಿಡಿಭಾಗಗಳು ರನ್‌ವೇ ಸುತ್ತಮುತ್ತ ನೂರಾರು ಮೀಟರ್‌ಗಳವರೆಗೆ ಚದುರಿಹೋಗಿವೆ. ಇಡೀ ಪ್ರದೇಶವು ಕಪ್ಪು ಹೊಗೆಯಿಂದ ಆವೃತವಾಗಿತ್ತು. ಅಗ್ನಿಶಾಮಕ ದಳದ ವಾಹನಗಳು ಬೆಂಕಿಯನ್ನು ನಂದಿಸಿವೆ. ಪ್ರಸ್ತುತ ಪೊಲೀಸ್ ಮತ್ತು ಎನ್‌ಡಿಆರ್‌ಎಫ್ (NDRF) ತಂಡಗಳು ವಿಮಾನದ ಅವಶೇಷಗಳ ಅಡಿಯಿಂದ ಮೃತದೇಹಗಳನ್ನು ಹೊರತೆಗೆಯುವ ಕೆಲಸದಲ್ಲಿ ತೊಡಗಿವೆ. ಈ ದುರಂತದಲ್ಲಿ ಅಜಿತ್ ಪವಾರ್ ಮತ್ತು ಇತರ ಐವರು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More