Karnataka Budget Session: ಸಹಕಾರಿ ಸಂಘಗಳ ತಿದ್ದುಪಡಿ ವಿಧೇಯಕದ ಮೇಲೆ ಮಾತಾಡುತ್ತಿದ್ದ ಸವದಿಯನ್ನು ಕೆಣಕುವ ಯತ್ನದಲ್ಲಿ ಬಸನಗೌಡ ಪಾಟೀಲ್ ವಿಫಲ

|

Updated on: Feb 19, 2024 | 5:32 PM

ಯತ್ನಾಳ್ ಮಾತಿಗೆ ಪ್ರತಿಕ್ರಿಯಿಸುವ ಗೋಜಿಗೆ ಹೋಗದ ಸವದಿ ತಮ್ಮ ಮಾತು ಮುಂದುವರಿಸುತ್ತಾ, ವಿಧೇಯಕನ್ನು ಪಾಸು ಮಾಡುವುದು ಬಿಡುವುದು ಸದನಕ್ಕೆ ಬಿಟ್ಟ ಅಂಶವಾಗಿದೆ, ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಅಂಶದಲ್ಲಿ ಪಕ್ಷಪಾತ ಮಾಡುವ ಮನೋಭಾವ ತನ್ನದಲ್ಲ, ಸಾಮಾಜಿಕ ನ್ಯಾಯದ ಕಳಕಳಿಯನ್ನು ವಿಧೇಯಕದಲ್ಲಿ ನೋಡಬಹದು, ಅದನ್ನು ಶ್ಲಾಘಿಸುತ್ತೇನೆ ಎಂದು ಹೇಳಿದರು.

ಬೆಂಗಳೂರು: ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ (Laxman Savadi) ಮತ್ತು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ (Basangouda Patil Yatnal) ನಡುವೆ ದಶಕಗಳಿಂದ ಸ್ನೇಹವಿದೆ. ಈಗ ಅವರು ಬೇರೆ ಬೇರೆ ಪಕ್ಷಗಳಲ್ಲಿರಬಹುದು, ಆದರೆ ಸವದಿ ಟರ್ನ್ ಕೋಟ್ ಆಗುವ ಇಬ್ಬರೂ ಬಿಜೆಪಿಯ ಧುರೀಣರಾಗಿದ್ದರು. ಇವತ್ತು ಸದನದಲ್ಲಿ ಕರ್ನಾಟಕ ಸಹಕಾರಿ ಸಂಘಗಳ ತಿದ್ದುಪಡಿ ವಿಧೇಯಕ 2024 (Cooperative Societies Amendment Bill 2024) ಮೇಲೆ ಚರ್ಚೆ ನಡೆಯುತ್ತಿದ್ದಾಗ ಲಕ್ಷ್ಮಣ ಸವದಿಯವರು ಸಹಕಾರ ಸಚಿವ ಕೆಎನ್ ರಾಜಣ್ಣ ಮಾಡಿರುವ ಶಿಫಾರಸ್ಸಗಳನ್ನು ವಿವರಿಸುತ್ತಾ ತಮ್ಮ ಸಹಮತ ವ್ಯಕ್ತಡಿಸುತ್ತಿದ್ದಾಗ ಯತ್ನಾಳ್ ಎದ್ದು ನಿಂತು, ಸಹಕಾರ ಕ್ಷೇತ್ರ ಉಳಿಯಬೇಕಾದರೆ, ನಾವೆಲ್ಲ ಪಕ್ಷಬೇಧ ಮರೆತು ಒಂದಾಗಬೇಕು, ಆ ಕಡೆ ಇದ್ದಾಗ ಒಂದು ಮಾತು ಈ ಕಡೆಯಿಂದ ಬೇರೆ ಮಾತು ಆಡಿದರೆ ಪ್ರಯೋಜನವಾಗದು ಲಕ್ಷ್ಮಣ ಅಣ್ಣನವರೇ ಅಂತ ತಿವಿಯುತ್ತಾರೆ.

ಆದರೆ, ಅವರ ಮಾತಿಗೆ ಪ್ರತಿಕ್ರಿಯಿಸುವ ಗೋಜಿಗೆ ಹೋಗದ ಸವದಿ ತಮ್ಮ ಮಾತು ಮುಂದುವರಿಸುತ್ತಾ, ವಿಧೇಯಕನ್ನು ಪಾಸು ಮಾಡುವುದು ಬಿಡುವುದು ಸದನಕ್ಕೆ ಬಿಟ್ಟ ಅಂಶವಾಗಿದೆ, ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಅಂಶದಲ್ಲಿ ಪಕ್ಷಪಾತ ಮಾಡುವ ಮನೋಭಾವ ತನ್ನದಲ್ಲ, ಸಾಮಾಜಿಕ ನ್ಯಾಯದ ಕಳಕಳಿಯನ್ನು ವಿಧೇಯಕದಲ್ಲಿ ನೋಡಬಹದು, ಅದನ್ನು ಶ್ಲಾಘಿಸುತ್ತೇನೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ