Karnataka Budget Session: ಕಾಂಗ್ರೆಸ್ ಪರ ಬ್ಯಾಟ್ ಬೀಸುವುದು ಮುಂದುವರಿಸಿದ ಸೋಮಶೇಖರ್, ಸದನದಲ್ಲಿ ರಾಜಣ್ಣ ಕೊಂಡಾಟ!
ಈಗಿನ ಸಹಕಾರ ಸಚಿವ ಕೆಎನ್ ರಾಜಣ್ಣ ತೆಗೆದುಕೊಂಡಿರುವ ಕೆಲ ಕ್ರಮಗಳನ್ನು ಮುಕ್ತವಾಗಿ ಕೊಂಡಾಡಿ ತಮ್ಮ ಪಕ್ಷದ ಶಾಸಕರನ್ನು ಮುಜುಗರಕ್ಕೀಡು ಮಾಡಿ, ರಾಜಣ್ಣ ಮತ್ತು ಆಡಳಿತ ಪಕ್ಷದ ಸದಸ್ಯರನ್ನು ಖುಷಿ ಮತ್ತು ಅಭಿಮಾನದಿಂದ ಬೀಗುವಂತೆ ಮಾಡಿದರು. ಚುನಾವಣಾ ಪ್ರಾಧಿಕಾರವನ್ನು ರದ್ದು ಮಾಡಿರುವ ರಾಜಣ್ಣರ ಕ್ರಮವನ್ನು ಸೋಮಶೇಖರ್ ಸ್ವಾಗತಿಸಿದರು ಮತ್ತು ಸಚಿವರನ್ನು ಅಭಿನಂದಿಸಿದರು.
ಬೆಂಗಳೂರು: ಮಾಜಿ ಸಹಕಾರ ಸಚಿವ ಮತ್ತು ಯಶವಂತಪುರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ (ST Somashekhar) ಅವರ ಪಕ್ಷನಿಷ್ಠೆ ಬಹಳ ದಿನಗಳಿಂದ ಚರ್ಚೆ ಮತ್ತು ಪ್ರಶ್ನೆಯಲ್ಲಿದೆ. ಅವರು ಸಿದ್ದರಾಮಯ್ಯ ಸರ್ಕಾರದ (Siddaramaiah government) ಪರ ಬ್ಯಾಟ್ ಬೀಸುವುದನ್ನು ಈಗ ಸದನದಲ್ಲೂ ಆರಂಭಿಸಿದ್ದಾರೆ. ಇಂದು ಸದನದಲ್ಲಿ ಸಹಕಾರ ಕ್ಷೇತ್ರದ (cooperation sector) ಚರ್ಚೆಯಲ್ಲಿ ಭಾಗವಹಿಸಿದ ಅವರು, ಈಗಿನ ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ತೆಗೆದುಕೊಂಡಿರುವ ಕೆಲ ಕ್ರಮಗಳನ್ನು ಮುಕ್ತವಾಗಿ ಕೊಂಡಾಡಿ ತಮ್ಮ ಪಕ್ಷದ ಶಾಸಕರನ್ನು ಮುಜುಗರಕ್ಕೀಡು ಮಾಡಿ, ರಾಜಣ್ಣ ಮತ್ತು ಆಡಳಿತ ಪಕ್ಷದ ಸದಸ್ಯರನ್ನು ಖುಷಿ ಮತ್ತು ಅಭಿಮಾನದಿಂದ ಬೀಗುವಂತೆ ಮಾಡಿದರು. ಚುನಾವಣಾ ಪ್ರಾಧಿಕಾರವನ್ನು ರದ್ದು ಮಾಡಿರುವ ರಾಜಣ್ಣರ ಕ್ರಮವನ್ನು ಸೋಮಶೇಖರ್ ಸ್ವಾಗತಿಸಿದರು ಮತ್ತು ಸಚಿವರನ್ನು ಅಭಿನಂದಿಸಿದರು. ತಾನು ಸಚಿವನಾಗಿದ್ದಾಗ ಪ್ರಾಧಿಕಾರವನ್ನು ಅಬಾಲಿಶ್ ಮಾಡುವ ಪ್ರಯತ್ನ ಮಾಡಿದಾಗ್ಯೂ ಅದು ಸಾಧ್ಯವಾಗಿರಲಿಲ್ಲ. ಅದನ್ನು ತೆಗೆದುಹಾಕಬೇಕೆಂದು ಎಲ್ಲ ಪಕ್ಷಗಳ ಒಕ್ಕೊರಲಿನ ಬೇಡಿಕೆಯಾಗಿತ್ತು ಎಂದು ಹೇಳಿದ ಸೋಮಶೇಖರ್, ಸರ್ಕಾರ ಈಗ ರಿಜಿಸ್ಟ್ರಾರ್ ಅಧೀನದಲ್ಲಿ ಕೆಲಸ ಮಾಡುವ ಒಬ್ಬ ಹೆಚ್ಚುವರಿ ರಿಜಿಸ್ಟ್ರಾರ್ ಅನ್ನು ನೇಮಕ ಮಾಡಬೇಕೆಂದು ಹೇಳಿದರು. ಮುಂದುವರಿದು ಮಾತಾಡಿದ ಅವರು, ಚುನಾವಣಾ ಪ್ರಾಧಿಕಾರದಿಂದ ಆಗುತ್ತಿದ್ದ ಸಮಸ್ಯೆಗಳನ್ನು ಸದನಕ್ಕೆ ವಿವರಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ