ಕೊಲೆಯೊಂದರಲ್ಲಿ ಭಾಗಿಯಾಗಿದ್ದಾರೆಂದು ತನ್ವೀರ್ ಪೀರ್ ಹಾಷ್ಮಿ ವಿರುದ್ಧ ಬಸನಗೌಡ ಪಾಟೀಲ್ ಮತ್ತೊಂದು ಗಂಭೀರ ಆರೋಪ!
ಬುಧವಾರದಂದು ಟಿವಿ9 ಕನ್ನಡ ವಾಹಿನಿಯ ಇದೇ ವರದಿಗಾರನೊಂದಿಗೆ ಮಾತಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಯ್ಯದ ತನ್ವೀರ್ ಪೀರ್ ಹಾಷ್ಮಿ ವಿರುದ್ಧ ಹಲವು ಗುರುತರವಾದ ಆರೋಪಗಳನ್ನು ಮಾಡಿದ್ದರು. ಈಗ ಕೊಲೆ ಅರೋಪ ಮಾಡುತ್ತಿದ್ದಾರೆ ಮತ್ತು ಪೊಲೀಸರು ತನ್ವೀರ್ ಹೆಸರನ್ನು ಚಾರ್ಜ್ ಶೀಟ್ ನಿಂದ ತೆಗೆದುಹಾಕಿದ್ದಾರೆ ಅಂತ ಹೇಳಿ ಸಿದ್ದರಾಮಯ್ಯ ಸರ್ಕಾರವನ್ನು ಕಟಕಟೆಯಲ್ಲಿ ನಿಲ್ಲಿಸಿದ್ದಾರೆ.
ಬೆಳಗಾವಿ: ಬೆಳಗಾವಿ ವಿಧಾನಸಭಾ ಅಧಿವೇಶನದ (Belagavi Assembly Session) ನಾಲ್ಕನೇ ದಿನವಾದ ಇಂದು ಮಧ್ಯಾಹ್ನದ ಊಟದ ಬಿಡುವಿನಲ್ಲಿ ಟಿವಿ9 ವರದಿಗಾರನೊಂದಿಗೆ ಮಾತಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ವಿಜಯಪುರದ ಮೌಲ್ವಿ ಸಯ್ಯದ್ ತನ್ವೀರ್ ಪೀರ್ (sayed Tanveer Peer Hashmi) ಅವರ ವಿರುದ್ಧ ಕೊಲೆ ಆರೋಪವನ್ನೂ ಮಾಡಿದರು. ಹತ್ಯೆಯಾದ ವ್ಯಕ್ತಿಯ ಪತ್ನಿಯೇ ಡಿಜಿಪಿ ಅವರಿಗೆ ದೂರು ಸಲ್ಲಿಸಿದ್ದಾರೆ, ತನ್ವೀರ್ ಹೆಸರು ಚಾರ್ಜ್ ಶೀಟ್ ನಲ್ಲೂ ಇತ್ತು, ಅದರೆ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಅವರ ಹೆಸರನ್ನು ತೆಗೆಸಿಬಿಟ್ಟಿದೆ, ಪೊಲೀಸ್ ಇಲಾಖೆ ಸರ್ಕಾರ ಹೇಳಿದ ಹಾಗೆ ಕುಣಿಯುತ್ತಿದೆ ಎಂದು ಬಸನಗೌಡ ಯತ್ನಾಳ್ ಹೇಳಿದರು. ತನ್ವೀರ್ ಪೀರ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಸಾರೇ ಜಹಾಂ ಸೇ ಅಚ್ಛಾ ಹಿಂದೂಸ್ತಾನ್ ಹಮಾರಾ ಅಂತ ಹೇಳಿದ್ದಾರೆ ಅಂತ ಹೇಳಿದ್ದನ್ನು ಗಮನಕ್ಕೆ ತಂದಾಗ ಅವಸರದಲ್ಲಿದ್ದ ಅವರು, ಅದರ ಬಗ್ಗೆ ಸಾಯಂಕಾಲ 6 ಗಂಟೆಯ ಬಳಿಕ ಮಾತಾಡುವುದಾಗಿ ಹೇಳಿ ಒಳನಡೆದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ