BJP state unit president: ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ಬಸನಗೌಡ ಯತ್ನಾಳ್ ರೇಸ್​ನಲ್ಲಿದ್ದಾರೆಯೇ, ಖುದ್ದು ಶಾಸಕ ಹೇಳಿದ್ದೇನು?

|

Updated on: Jul 04, 2023 | 7:31 PM

ಅದು ಪಕ್ಷದ ಆಂತರಿಕ ವಿಷಯವಾಗಿರುವುದರಿಂದ ಗೌಪ್ಯತೆ ಕಾಪಾಡಬೇಕಾಗುತ್ತದೆ ಅಂತ ಯತ್ನಾಳ್ ಹೇಳಿದರು.

ಬೆಂಗಳೂರು: ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಪಕ್ಷದ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ-ಎರಡೂ ಸ್ಥಾನಗಳ ಮೇಲೆ ಕಣ್ಟಿಟ್ಟುರುಂತಿದೆ. ಪಕ್ಷದ ಹಿರಿಯ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಸಹ ಯತ್ನಾಳ್ ಪರ ಪರೋಕ್ಷವಾಗಿ ಬ್ಯಾಟ್ ಮಾಡಿದ್ದಾರೆ. ಇಂದು ಸಾಯಂಕಾಲ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಾಸಕರಿಗೆ; ಈಶ್ವರಪ್ಪ ಹಿಂದೂತ್ವವನ್ನು (Hindutva) ಬಲವಾಗಿ ಪ್ರತಿಪಾದಿಸುವ ನಾಯಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನಾಗಬೇಕೆಂದು ಹೇಳಿದ್ದು ಮತ್ತು ಯತ್ನಾಲ್ ಇದ್ದಾರಲ್ಲ ಪತ್ರಕರ್ತರು ಅವರಿಗೆ ತಿಳಿಸಿದ್ದನ್ನು ಗಮನಕ್ಕೆ ತಂದಾಗ ಮುಖದಲ್ಲಿ ಮಂದಹಾಸ ಕಂಡಿತು. ಅವರ ಪ್ರತಿಕ್ರಿಯೆಯನ್ನು ಸುದ್ದಿಗಾರರು ಕೇಳಿದಾಗ, ಅದು ಪಕ್ಷದ ಆಂತರಿಕ ವಿಷಯವಾಗಿರುವುದರಿಂದ ಗೌಪ್ಯತೆ ಕಾಪಾಡಬೇಕಾಗುತ್ತದೆ ಅಂತ ಹೇಳಿ ಅಲ್ಲಿಂದ ಹೊರಟರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ