Pandemonium in the House: ಬಜೆಟ್ ಅಧಿವೇಶನದ ಎರಡನೇ ದಿನ ಕೇವಲ ವಾದ-ವಾಗ್ವಾದಗಳಿಗೆ ಸಾಕ್ಷಿಯಾಗಿತ್ತು!
ಸಚಿವ ಪ್ರಿಯಾಂಕ್ ಖರ್ಗೆ, ನೀವು ಅಧಿಕಾರದಲ್ಲಿದ್ದಾಗಲೂ ಸದನ ನಡೆಸಲಿಲ್ಲ ಪ್ರತಿಪಕ್ಷದ ಸ್ಥಾನದಲ್ಲಿದ್ದರೂ ಅದನ್ನೇ ಮಾಡುತ್ತಿರುವಿರಿ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು: ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ (Budget Session) ಎರಡನೇ ದಿನವಾದ ಇಂದು ಆಡಳಿಯ ಪಕ್ಷ ಮತ್ತು ಪ್ರತಿಪಕ್ಷಗಳ ನಾಯಕರ ವಾದ-ವಾಗ್ವಾದಗಳೇ ಪ್ರಮುಖ ಆಕರ್ಷಣೆಗಳಾಗಿದ್ದವು. ಬಸವರಾಜ ಬೊಮ್ಮಾಯಿ, (Basavaraj Bommai) ಹೆಚ್ ಡಿ ಕುಮಾರಸ್ವಾಮಿ, ಆರ್ ಆಶೋಕ ಮತ್ತು ವಿರೋಧ ಪಕ್ಷಗಳ ನಾಯಕರು ಸರ್ಕಾರದ ಮೇಲೆ ಮುಗಿಬಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಪ್ರಿಯಾಂಕ್ ಖರ್ಗೆ ಮೊದಲಾದವರು ವಿರೋಧೀ ನಾಯಕರ ಬೌನ್ಸರ್, ಯಾರ್ಕರ್ ಗಳನ್ನು ಸಮರ್ಥವಾಗೇ ಎದುರಿಸಿದರು. ಪ್ರತಿಪಕ್ಷಗಳಿಗೆ ಸದನ ನಡೆಯುವುದು ಬೇಕಿಲ್ಲ, ಕೇವಲ ರಾಜಕಾರಣ ಮಾಡೋದು ಬೇಕಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಶೂನ್ಯ ವೇಳೆಯ ಬಳಿಕ ಸಬ್ ಮಿಶನ್ ಗೆ ಅವಕಾಶ ನೀಡಲಿಲ್ಲ ಎಂದು ಬೊಮ್ಮಾಯಿ ಅರೋಪಿಸಿದಾಗ ಸಭಾಧ್ಯಕ್ಷ ಯುಟಿ ಖಾದರ್ ಸಬ್ ಮಿಶನ್ ಅವಕಾಶ ನೀಡಲ್ಲ ಅಂತ ಹೇಳಿಲ್ಲ ಎಂದು ಮಧ್ಯಪ್ರವೇಶಿಸಿದರು. ಸಚಿವ ಪ್ರಿಯಾಂಕ್ ಖರ್ಗೆ, ನೀವು ಅಧಿಕಾರದಲ್ಲಿದ್ದಾಗಲೂ ಸದನ ನಡೆಸಲಿಲ್ಲ ಪ್ರತಿಪಕ್ಷದ ಸ್ಥಾನದಲ್ಲಿದ್ದರೂ ಅದನ್ನೇ ಮಾಡುತ್ತಿರುವಿರಿ ಎಂದು ಬೇಸರ ವ್ಯಕ್ತಪಡಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ