BJP stage protest: ಷರತ್ತುಗಳಿಲ್ಲದೆ ಸರ್ಕಾರ ಗ್ಯಾರಂಟಿಗಳನ್ನು ಜಾರಿಗೊಳಿಸದ ಹೊರತು ಬಿಜೆಪಿ ಹೋರಾಟ ನಿಲ್ಲಿಸದು: ಬಿವೈ ವಿಜಯೇಂದ್ರ
ವಿಜಯೇಂದ್ರ ಮಾತಾಡುತ್ತಿದ್ದುದನ್ನು ಯಡಿಯೂರಪ್ಪ ಅಭಿಮಾನದಿಂದ ಕೇಳಿಸಿಕೊಳ್ಳುತ್ತಿದ್ದರು.
ಬೆಂಗಳೂರು: ನಗರದ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಧಾನಸಭೆಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಪಾಲ್ಗೊಂಡ ಬಳಿಕ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಶಾಸಕ ಬಿವೈ ವಿಜಯೇಂದ್ರ (BY Vijayendra) ತಮ್ಮ ತಂದೆ ಬಿಎಸ್ ಯಡಿಯೂರಪ್ಪ (BS Yediyurappa) ಸಮ್ಮುಖದಲ್ಲಿ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಕ್ಕೆ ಬಂದ ಮೊದಲ ದಿನವೇ ಎಲ್ಲ 5 ಗ್ಯಾರಂಟಿಗಳನ್ನು ಜಾರಿಗೊಳಿಸುವುದಾಗಿ ಹೇಳಿದ್ದ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ಸರ್ಕಾರ ರಚನೆಯಾಗಿ 45 ದಿನ ಕಳೆದರೂ ಷರತ್ತುಗಳಿಲ್ಲದೆ ಯಾವ ಗ್ಯಾರಂಟಿಯನ್ನೂ ಪೂರ್ತಿಗೊಳಿಸಿಲ್ಲ ಎಂದು ಹೇಳಿದರು. ಎಲ್ಲ ಗ್ಯಾರಂಟಿಗಳನ್ನು ಷರತ್ತುಗಳಿಲ್ಲದೆ ಸರ್ಕಾರ ಜಾರಿಗೊಳಿಸದ ಹೊರತು ವಿಧಾನ ಸಭೆ ಒಳಗೆ ಮತ್ತು ಹೊರಗೆ ಬಿಜೆಪಿ ಹೋರಾಟ ಜಾರಿಯಲ್ಲಿಡಲಿದೆ ಎಂದು ವಿಜಯೇಂದ್ರ ಹೇಳಿದರು . ಅವರು ಮಾತಾಡುತ್ತಿದ್ದುದನ್ನು ಯಡಿಯೂರಪ್ಪ ಅಭಿಮಾನದಿಂದ ಕೇಳಿಸಿಕೊಳ್ಳುತ್ತಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ