ಸ್ಕೂಲ್ ಮಕ್ಕಳೇ ಬಸ್ ತಡೆದ್ರು.. ರಸ್ತೆಯಲ್ಲಿ ನಿಂತು ಸಿ ಎಂ ಸರ್ ಅಂತ ಕೂಗಿದ್ರು
ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕಿರಸ್ಯಾಳ ಗ್ರಾಮದ ಬಳಿ ಕಿರಶ್ಯಾಳ, ಹೆಬ್ಬಾಳ, ಬಿದ್ನಾಳ, ಹಾಲ್ಯಾಳ ಗ್ರಾಮಗಳ ವಿದ್ಯಾರ್ಥಿಗಳು ಬಸ್ ಗಳ ತಡೆದು ಪ್ರತಿಭಟಿಸಿದರು.
ವಿಜಯಪುರ: ಶಾಲಾ ಕಾಲೇಜಗಳಿಗೆ ತೆರಳಲು ಸೂಕ್ತ ಬಸ್ ವ್ಯವಸ್ಥೆಗಾಗಿ ಆಗ್ರಹಿಸಿ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಬಸ್ ತಡೆದು ಹೋರಾಟ ನಡೆಸಿದ್ದಾರೆ. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕಿರಸ್ಯಾಳ ಗ್ರಾಮದ ಬಳಿ ಕಿರಶ್ಯಾಳ, ಹೆಬ್ಬಾಳ, ಬಿದ್ನಾಳ, ಹಾಲ್ಯಾಳ ಗ್ರಾಮಗಳ ವಿದ್ಯಾರ್ಥಿಗಳು ಬಸ್ ಗಳ ತಡೆದು ಪ್ರತಿಭಟಿಸಿದರು. ಬಸವನಬಾಗೇವಾಡಿ ಪಟ್ಟಣದಿಂದ ನಿಡಗುಂದಿ ಪಟ್ಟಣಕ್ಕೆ ತೆರಳೋ ಮಾರ್ಗದಲ್ಲಿ ಬಸ್ ಗಳ ಸಮಸ್ಯೆ ಎದುರಾಗಿದೆ. ಆದರೆ ವಿದ್ಯಾರ್ಥಿಗಳ ಬಸ್ ತಡೆದು ಪ್ರತಿಭಟಿಸಿದರೂ ಬಸ್ ಗಳ ಚಾಲಕರು ಹಾಗೂ ನಿರ್ವಾಹಕರು ಕೇರ್ ಮಾಡಲಿಲ್ಲ. ಚಾಲಕರು ಹಾಗೂ ನಿರ್ವಾಹಕರು ತಮ್ಮ ಬಸ್ ಗಳನ್ನು ಬಿಟ್ಟು ಜಮೀನಿನಲ್ಲಿ ಕುಳಿತರು. ಸ್ಥಳಕ್ಕೆ ಆಗಮಿಸಿದ 112 ಪೊಲೀಸರು, ವಿದ್ಯಾರ್ಥಿಗಳ ಜೊತೆಗೆ ಮಾತುಕತೆ ನಡೆಸಿದರು. ವಿದ್ಯಾರ್ಥಿಗಳಿಗಾಗಿ ಸೂಕ್ತ ಬಸ್ ಗಳನ್ನು ಬಿಡಿಸಲಾಗುತ್ತದೆ ಎಂದು ಪೊಲೀಸರು ಭರವಸೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ವಾಪಸ್ ಪಡೆದರು.
Latest Videos