ಶಿಸ್ತುಪಾಲನಾ ಸಮಿತಿ ಎದುರು ಹಾಜರಾದ ಬಳಿಕ ಯತ್ನಾಳ್ ಮಾಧ್ಯಮಗಳ ಮುಂದೆ ಮಂಕಾದರು!

|

Updated on: Dec 04, 2024 | 5:36 PM

ಶಿಸ್ತು ಪಾಲನಾ ಸಮಿತಿಯು ಬಸನಗೌಡ ಯತ್ನಾಳ್ ಅವರನ್ನು ಟೋನ್ ಡೌನ್ ಮಾಡಿದ್ದು ಅವರ ಹಾವಭಾವ, ಬಾಡಿ ಲ್ಯಾಂಗ್ವೇಜ್ ನಿಂದ ಗೊತ್ತಾಗುತ್ತದೆ. ಅವರ ಮಾತಿನಲ್ಲಿ ಮೊದಲಿನ ತೀವ್ರತೆ, ತೀಕ್ಷ್ಣತೆ ಮತ್ತು ಎಲ್ಲಕ್ಕೂ ಮುಖ್ಯವಾಗಿ ಡೆವಿಲ್ ಮೇ ಕೇರ್ ಅಟಿಟ್ಯೂಡ್ ಕಾಣದಾಗಿದೆ. ಎಲ್ಲೋ ನೋಡುತ್ತಾ ಮಾತಾಡುತ್ತಾರೆ. ಕೇಳಿದ ಪ್ರಶ್ನೆ ಇಕ್ಕಟ್ಟಿಗೆ ಸಿಕ್ಕಿಸುವಂತಿದ್ದರೆ ಅಸಹನೆ ಪ್ರದರ್ಶಿಸುತ್ತಾರೆ.

ದೆಹಲಿ: ಪಕ್ಷದ ಶಿಸ್ತುಪಾಲನಾ ಸಮಿತಿ ಮುಂದೆ ಮೌಖಿಕವಾಗಿಯೂ ಇಂದು ಹಾಜರಾದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ಜೊತೆ ನಡೆದ ಒಂದು ತಾಸಿಗೂ ಹೆಚ್ಚಿನ ಮಾತುಕತೆಯಲ್ಲಿ ಮಾಧ್ಯಮಗಳ ಮುಂದೆ ಹೇಳಿದ್ದನ್ನೇ ಹೇಳಿದ್ದೇನೆ, ಅದನ್ನೆಲ್ಲ ವಿವರವಾಗಿ ಹೇಳಲಾಗಲ್ಲ ಎಂದು ಯತ್ನಾಳ್ ಹೇಳಿದರು. ವಕ್ಫ್ ಮತ್ತು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಮಾಡುತ್ತಿರುವ ಹೋರಾಟ ಮುಂದುವರಿಸಿ, ಪಕ್ಷದ ಆಂತರಿಕ ವಿಷಯಗಳನ್ನು ಸಾರ್ವಜನಿಕವಾಗಿ ಮಾತಾಡಬೇಡಿ ಎಂದು ಸಮಿತಿಯು ತನಗೆ ಸೂಚನೆ ನೀಡಿದೆ ಎಂದು ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಯತ್ನಾಳ್ ತಂಡದ ಹೆಸರು ಹೇಳಲು ತಯಾರಿಲ್ಲದ ವಿಜಯೇಂದ್ರ ತಮ್ಮ ಪಕ್ಷದವರನ್ನೇ ಕೆಲವರು ಎನ್ನುತ್ತಾರೆ!

Published on: Dec 04, 2024 05:35 PM