ಬಸನಗೌಡ ಯತ್ನಾಳ್ ಮಾಧ್ಯಮದೆದುರು ಪ್ರತ್ಯಕ್ಷರಾದರೂ ಶಿವಾನಂದ ಪಾಟೀಲ್​ರ ಸವಾಲು ಸ್ವೀಕರಿಸಲಿಲ್ಲ

ಅರುಣ್​ ಕುಮಾರ್​ ಬೆಳ್ಳಿ

Updated on: May 08, 2025 | 1:24 PM

ತಾನ್ಯಾಕೆ ರಾಜೀನಾಮೆ ಸಲ್ಲಿಸಬೇಕು ಎಂದು ಬಸನಗೌಡ ಯತ್ನಾಳ್ ತೀಕ್ಷ್ನವಾಗಿ ಪ್ರತಿಕ್ರಿಯಿಸಿದರು. ಶಿವಾನಂದ ಪಾಟೀಲ್ ರಾಜೀನಾಮೆ ನೀಡಿದರೆ ತಾನೂ ನೀಡೋದಾಗಿ ಯಾವಾಗ ಹೇಳಿದ್ದೆ ಎಂದು ಯತ್ನಾಳ್ ಪ್ರಶ್ನಿಸಿದರು. ಆದರೆ ಯತ್ನಾಳ್, ರಾಜೀನಾಮೆ ಸಲ್ಲಿಸುವಂತೆ ಸವಾಲು ಹಾಕಿದ್ದರು, ಮತ್ತು ಶಿವಾನಂದ ಪಾಟೀಲ್ ವಿಜಯಪುರಕ್ಕೆ ಬರೋದು ಬೇಡ ತಾನೇ ಬಾಗೇವಾಡಿಗೆ ಹೋಗಿ ಶಿವಾನಂದರನ್ನು ಸೋಲಿಸುತ್ತೇನೆ ಎಂದಿದ್ದರು.

ಬೆಂಗಳೂರು, ಮೇ 8: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೆಚ್ಚು ಕಡಿಮೆ ಒಂದು ವಾರದ ನಂತರ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾದರು ಅದರೆ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ (Shivanand Patil) ಎಸೆದಿರುವ ಸವಾಲು ಸ್ವೀಕರಿಸುವ ಬದಲು ಶಿವಾನಂದ್ ಗೆ ಕಾಮನ ಸೆನ್ಸ್ ಇಲ್ಲ, ಗ್ರಾಮ ಪಂಚಾಯಿತಿ ಸದಸ್ಯನಿಗಿರುವಷ್ಟು ತಿಳುವಳಿಕೆ ಇಲ್ಲ, ರಾಜೀನಾಮೆ ಪತ್ರ ಯಾರಾದರೂ ಹಾಗೆ ಷರತ್ತುಬದ್ಧವಾಗಿ ಬರೆಯುತ್ತಾರೆಯೇ ಎಂದು ವಿತಂಡವಾದ ಮಾಡುತ್ತ ರಾಜೀನಾಮೆ ಪತ್ರ ಬರೆಯುವುದನ್ನು ಮತ್ತೊಮ್ಮೆ ವಿವರಿಸಿದರು. ಅವರು ಬ್ಲ್ಯಾಂಕ್ ಲೆಟರ್ ಹೆಡ್ ಕೊಡುತ್ತೇನೆ ಅಂತ ಹೇಳೋದ್ರಲ್ಲಿ ಅರ್ಥವಿಲ್ಲ, ಎಲ್ಲ ನಾಟಕ, ತಾನು ವಕ್ಫ್ ಬೋರ್ಡ್ ವಿರುದ್ಧ ನಡೆಸಿದ ಹೋರಾಟ ಸಫಲವಾಗಿದೆ, ಹಾಗಾಗಿ ಇದೆನ್ನೆಲ್ಲ ಮಾಡುತ್ತಿದ್ದಾರೆ ಎಂದು ಯತ್ನಾಳ್ ಹೇಳಿದರು.

ಇದನ್ನೂ ಓದಿ:  ನನ್ನ ತಂದೆಯ ಸವಾಲನ್ನು ಯತ್ನಾಳ್ ಸ್ವೀಕರಿಸಲಿಲ್ಲವೆಂದು ನನ್ನ ಮಕ್ಕಳಿಗೆ ಹೇಳುತ್ತೇನೆ: ಶಿವಾನಂದ ಪಾಟೀಲ್ ಮಗ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.