ಬಸವನಗುಡಿ ಕಡಲೆಕಾಯಿ ಪರಿಷೆ: 10 ಲಕ್ಷ ರೂ. ಕೂಗಿದವರನ್ನು ಬಿಟ್ಟು, 8 ಲಕ್ಷ ರೂ. ಎಂದವರಿಗೆ ಟೆಂಡರ್ ಕೊಟ್ಟ ಅಧಿಕಾರಿಗಳು

| Updated By: ಗಂಗಾಧರ​ ಬ. ಸಾಬೋಜಿ

Updated on: Nov 17, 2022 | 5:39 PM

ಬಸವನಗುಡಿ ದೊಡ್ಡಗಣಪತಿ ದೇಗುಲದ ಆವರಣದಲ್ಲಿ ನಡೆಯುವ ಕಡಲೆಕಾಯಿ ಪರಿಷೆ ಟೆಂಡರ್​ ಕೈತಪ್ಪಿದ್ದಕ್ಕೆ ದೇಗುಲದ ಮುಂದೆ ವ್ಯಾಪಾರಿ ಲತಾ ದಂಪತಿ ಕಣ್ಣೀರು ಹಾಕಿದ್ದಾರೆ. 

ಬೆಂಗಳೂರು: ನಗರದ ಬಸವನಗುಡಿಯ ದೊಡ್ಡಗಣಪತಿ (Basavanagudi Groundnut Parishe) ಜಾತ್ರೆಗೂ ಮುನ್ನವೇ ಟೆಂಡರ್​ ಗಲಾಟೆ ನಡೆದಿದ್ದು, 10 ಲಕ್ಷ ರೂ.  ಹಣವಿಟ್ಟು ಮಹಿಳೆ ಗೋಳಾಡಿದ್ದಾರೆ. ಟೆಂಡರ್​ ಪ್ರಕ್ರಿಯೆಯಲ್ಲಿ ವ್ಯಾಪಾರಿ ಲತಾ ದಂಪತಿ ಭಾಗಿಯಾಗಿ 10 ಲಕ್ಷಕ್ಕೆ ಕೂಗಿದ್ದಾರೆ. ಆದರೆ 10 ಲಕ್ಷಕ್ಕೆ ಟೆಂಡರ್​ ಕೂಗಿದ್ದವರನ್ನು ಬಿಟ್ಟು 8 ಲಕ್ಷ ರೂ. ಕೂಗಿದವರಿಗೆ ಅಧಿಕಾರಿಗಳು ಟೆಂಡರ್ ನೀಡಿದ್ದಾರೆ.​ ಮುಜರಾಯಿ ಇಲಾಖೆ ಅಧಿಕಾರಿಗಳ ಕಳ್ಳಾಟ ಪ್ರಶ್ನಿಸಿದ್ದಕ್ಕೆ ಲತಾರನ್ನು ನಿಂದನೆ ಮಾಡಲಾಗಿದೆ. ಬಸವನಗುಡಿ ದೊಡ್ಡಗಣಪತಿ ದೇಗುಲದ ಆವರಣದಲ್ಲಿ ನಡೆಯುವ ಕಡಲೆಕಾಯಿ ಪರಿಷೆ ಟೆಂಡರ್​ ಕೈತಪ್ಪಿದ್ದಕ್ಕೆ ದೇಗುಲದ ಮುಂದೆ ವ್ಯಾಪಾರಿ ಲತಾ ದಂಪತಿ ಕಣ್ಣೀರು ಹಾಕಿದ್ದಾರೆ. ಇನ್ನು ಈ ವಿಚಾರ ಮುಜರಾಯಿ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿ ಅವರಿಗೆ ತಿಳಿಯುತ್ತಿದ್ದಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.