ಕ್ಯಾಚ್ ಹಿಡಿದ್ರೆ ಚೆಂಡು ನಿಮ್ದೆ… ಬಿಬಿಎಲ್​​ನಲ್ಲಿ ಹೊಸ ರೂಲ್ಸ್​

Updated on: Nov 08, 2025 | 9:53 AM

BBL 2025-26: ಬಿಗ್ ಬ್ಯಾಷ್ ಲೀಗ್​ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯುತ್ತಿವೆ. ಅಡಿಲೇಡ್ ಸ್ಟ್ರೈಕರ್ಸ್, ಬ್ರಿಸ್ಬೇನ್ ಹೀಟ್, ಹೊಬಾರ್ಟ್ ಹರಿಕೇನ್ಸ್, ಮೆಲ್ಬೋರ್ನ್ ರೆನೆಗೇಡ್ಸ್, ಮೆಲ್ಬೋರ್ನ್ ಸ್ಟಾರ್ಸ್, ಪರ್ತ್ ಸ್ಕಾರ್ಚರ್ಸ್, ಸಿಡ್ನಿ ಸಿಕ್ಸರ್ಸ್ ಮತ್ತು ಸಿಡ್ನಿ ಥಂಡರ್ ಹೆಸರಿನ ಈ ತಂಡಗಳು ಈ ಬಾರಿ ಕೂಡ ಚಾಂಪಿಯನ್ ಪಟ್ಟಕ್ಕಾಗಿ ಪೈಪೋಟಿ ನಡೆಸಲಿದೆ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಿಗ್ ಬ್ಯಾಷ್​ ಲೀಗ್​ನಲ್ಲಿ ಹೊಸ ನಿಯಮವನ್ನು ಜಾರಿಗೊಳಿಸಲಾಗುತ್ತದೆ. ಆ ನಿಯಮವೆಂದರೆ ಕ್ಯಾಚ್ ಹಿಡಿದರೆ ಚೆಂಡು ನಿಮ್ದೆ ಎನ್ನುವ ರೂಲ್ಸ್​. ಅಂದರೆ ಪ್ರತಿ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಚೆಂಡು ಸ್ಟೇಡಿಯಂ ಗ್ಯಾಲರಿಗೆ ತಲುಪಿ ಪ್ರೇಕ್ಷಕನು ಆ ಚೆಂಡನ್ನು ಹಿಡಿದರೆ,  ಬಾಲ್ ಆತನದಾಗಲಿದೆ.

ಉದಾಹರಣೆಗೆ ಮೊದಲ ಓವರ್​ನಲ್ಲಿ ಮಿಚೆಲ್ ಮಾರ್ಷ್ ಬಾರಿಸಿದ ಚೆಂಡು ಸಿಕ್ಸ್ ಆಗಿ ಪ್ರೇಕ್ಷಕನ ಕೈ ಸೇರಿದರೆ ಆತ ಚೆಂಡನ್ನು ಮರಳಿಸಬೇಕಿಲ್ಲ. ಬದಲಾಗಿ ಆ ಚೆಂಡು ಆತ ಕೊಂಡೊಯ್ಯಬಹುದು. ಇತ್ತ ಹೊಸ ಚೆಂಡಿನೊಂದಿಗೆ ಪಂದ್ಯವನ್ನು ಮುಂದುವರೆಸಲಾಗುತ್ತದೆ.

ಈ ನಿಯಮವು ಕೇವಲ ಸಿಕ್ಸ್​ಗಾಗಿ ಮಾತ್ರವಲ್ಲ. ಬದಲಾಗಿ ಫೋರ್ ಹೋಗಿ ಸಹ ಚೆಂಡು ಪ್ರೇಕ್ಷಕನ ಕೈ ಸೇರಿದರೆ ಅದನ್ನು ಮರಳಿಸಬೇಕಿಲ್ಲ. ಆದರೆ ಈ ನಿಯಮವು ಪ್ರತಿ ಇನಿಂಗ್ಸ್​ನ ಮೊದಲ ಓವರ್​ನಲ್ಲಿ ಮಾತ್ರ ಜಾರಿ ಇರಲಿದೆ. ಇಂತಹದೊಂದು ನಿಯಮವನ್ನು ಪರಿಚಯಿಸುವ ಮೂಲಕ ಪ್ರೇಕ್ಷಕರ ಉತ್ಸಾಹವನ್ನು ಹೆಚ್ಚಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಮುಂದಾಗಿದೆ.

ಅದರಂತೆ ಡಿಸೆಂಬರ್ 14 ರಿಂದ 15ನೇ ಸೀಸನ್​ ಮೂಲಕ ಹೊಸ ನಿಯಮ ಜಾರಿಗೆ ಬರಲಿದ್ದು, ಈ ನಿಯಮವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಬಿಗ್ ಬ್ಯಾಷ್​ ಲೀಗ್​ನಲ್ಲಿ ಕಣಕ್ಕಿಳಿಯುವ ತಂಡಗಳು:

  1. ಅಡಿಲೇಡ್ ಸ್ಟ್ರೈಕರ್ಸ್
  2. ಬ್ರಿಸ್ಬೇನ್ ಹೀಟ್
  3. ಹೊಬಾರ್ಟ್ ಹರಿಕೇನ್ಸ್
  4. ಮೆಲ್ಬೋರ್ನ್ ರೆನೆಗೇಡ್ಸ್
  5. ಮೆಲ್ಬೋರ್ನ್ ಸ್ಟಾರ್ಸ್
  6. ಪರ್ತ್ ಸ್ಕಾರ್ಚರ್ಸ್
  7. ಸಿಡ್ನಿ ಸಿಕ್ಸರ್ಸ್
  8. ಸಿಡ್ನಿ ಥಂಡರ್.