ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ ಪವಿತ್ರಾ ಗೌಡಗೆ ಮತ್ತೆ ಹಿನ್ನಡೆ
ಜಾಮೀನು ಅರ್ಜಿ ಪುನರ್ಪರಿಶೀಲನೆ ಮಾಡುವಂತೆ ಕೋರಿ ಪವಿತ್ರಾ ಗೌಡ ಅವರು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಈ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ದರ್ಶನ್ ಅವರು ಅರ್ಜಿ ಹಾಕಿದರೂ ಇದೇ ಸ್ಥಿತಿ ಬರುತ್ತದೆ ಎಂದು ಹೇಳಲಾಗುತ್ತಾ ಇದೆ. ಆ ಬಗ್ಗೆ ಇಲ್ಲಿದೆ ವಿವರ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪವಿತ್ರಾ ಗೌಡ ಅವರು ಮತ್ತೆ ಜೈಲು ಸೇರಿದ್ದಾರೆ. ಅವರು ಎ1 ಆರೋಪಿ ಆದರೆ, ದರ್ಶನ್ ಎ2 ಆರೋಪಿ ಆಗಿದ್ದಾರೆ. ಈ ಮೊದಲು ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ವಜಾ ಮಾಡಿತ್ತು. ಇದನ್ನು ಪುನರ್ ಪರಿಶೀಲನೆ ಮಾಡುವಂತೆ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠಕ್ಕೆ ಪವಿತ್ರಾ ಮನವಿ ಮಾಡಿದ್ದರು. ಆದರೆ, ಇದನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆಬಿ ಪರ್ದಿವಾಲ್ ಮತ್ತು ಆರ್. ಮಹಾದೇವನ್ ಅವರ ಪೀಠ ಅರ್ಜಿ ವಜಾ ಮಾಡಿದೆ.
‘ನಾವು ತೀರ್ಪು ಮತ್ತು ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದೇವೆ. ಆ ಬಳಿಕವೇ ಆದೇಶ ನೀಡಿದ್ದೆವೆ. ಮತ್ತೋಮ್ಮೆ ಪರಿಶೀಲನೆ ನಡೆಸಿ ಆದೇಶ ಮಾಡುವ ಅಗತ್ಯವಿಲ್ಲ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಇದರಿಂದ ಅವರಿಗೆ ದೊಡ್ಡ ಹಿನ್ನಡೆ ಆಗಿದೆ. ಹೀಗಾಗಿ, ಮತ್ತೊಂದು ಬಾಗಿಲು ಕೂಡ ಮುಚ್ಚಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಹುತ್ತಕ್ಕೆ ಕೈಹಾಕಿ ಹಾವನ್ನೆತ್ತಿ ಆಡಿದ ಬಾಲಕ; ಶಾಕಿಂಗ್ ವಿಡಿಯೋ ನೋಡಿ
ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್: JDS ಕಟ್ಟರ್ ಕಾರ್ಯಕರ್ತರೇ ಆರೋಪಿಗಳು!
'ಕೈ' ಟಿಕೆಟ್ ಸಿಗದಿದ್ರೆ BJPಯಿಂದ ಶಾಮನೂರು ಮೊಮ್ಮಗ ಸ್ಪರ್ಧೆ!: ಯತ್ನಾಳ್
ಇರಾನ್ ದಾಳಿಗೆ ಹೊತ್ತಿ ಉರಿದ ಕತಾರ್ನ ಅತಿದೊಡ್ಡ ಎಲ್ಎನ್ಜಿ ಸ್ಥಾವರ

