ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ, ನಡು ರಸ್ತೆಯಲ್ಲಿ ಅಂಗಾತ ಮಲಗಿದ ಜಾಂಬವಂತ!

ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ, ನಡು ರಸ್ತೆಯಲ್ಲಿ ಅಂಗಾತ ಮಲಗಿದ ಜಾಂಬವಂತ!

ಗಂಗಾಧರ​ ಬ. ಸಾಬೋಜಿ
|

Updated on:Jun 11, 2023 | 2:52 PM

ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎಂಬಂತೆ ಕರಡಿ ಒಂದು ನಡು ರಸ್ತೆಯಲ್ಲಿ ಮಲಗಿ ಕೆಲಕಾಲ ರೆಸ್ಟ್ ಮಾಡಿರುವಂತಹ ಅಪರೂಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಚಾಮರಾಜನಗರ: ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎಂಬಂತೆ ಕರಡಿ (bear) ಒಂದು ನಡು ರಸ್ತೆಯಲ್ಲಿ ಮಲಗಿ ಕೆಲಕಾಲ ರೆಸ್ಟ್ ಮಾಡಿರುವಂತಹ ಅಪರೂಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿ‌ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ರಸ್ತೆಯಲ್ಲಿ ಈ ಅಪರೂಪದ ದೃಶ್ಯ ಕಂಡುಬಂದಿದೆ. ಬಂಡೀಪುರ ಮಾರ್ಗ ಊಟಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕರಡಿ ಅಂಗಾತ ಮಲಗಿ ರಿಲ್ಯಾಕ್ಸ್​ ಮಾಡಿದೆ. ಕರಡಿಯ ಈ ವಿಡಿಯೋವನ್ನು ಪ್ರಯಾಣಿಕರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Jun 11, 2023 02:49 PM