Belagavi News: ಆಹಾರ ಅರಸಿ ಗ್ರಾಮಕ್ಕೆ ಬಂದ ಮೊಸಳೆ; ಹಗ್ಗದಿಂದ ಕಟ್ಟಿ ಸೆರೆ ಹಿಡಿದ ಗ್ರಾಮಸ್ಥರು

Belagavi News: ಆಹಾರ ಅರಸಿ ಗ್ರಾಮಕ್ಕೆ ಬಂದ ಮೊಸಳೆ; ಹಗ್ಗದಿಂದ ಕಟ್ಟಿ ಸೆರೆ ಹಿಡಿದ ಗ್ರಾಮಸ್ಥರು

ಕಿರಣ್ ಹನುಮಂತ್​ ಮಾದಾರ್
|

Updated on: Jun 11, 2023 | 9:04 AM

ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮಕ್ಕೆ ರಾತ್ರೋರಾತ್ರಿ ಆಹಾರ ಅರಸಿ ಮೊಸಳೆಯೊಂದು ಬಂದಿದೆ. ಬಳಿಕ ಅದೇ ಗ್ರಾಮದ ಪ್ರಕಾಶ್ ಸನದಿ ಎಂಬುವವರ ಮನೆಗೆ ಮೊಸಳೆ ನುಗ್ಗಿದ್ದು, ಕೂಡಲೇ ಗ್ರಾಮಸ್ಥರು ಸೇರಿ ಮೊಸಳೆಯನ್ನ ಹಗ್ಗದಿಂದ ಕಟ್ಟಿ ಸೆರೆ ಹಿಡಿದಿದ್ದಾರೆ.

ಬೆಳಗಾವಿ: ಜಿಲ್ಲೆಯ ಅಥಣಿ(Athani) ತಾಲೂಕಿನ ಸವದಿ ಗ್ರಾಮಕ್ಕೆ ರಾತ್ರೋರಾತ್ರಿ ಆಹಾರ ಅರಸಿ ಮೊಸಳೆ (Crocodile) ಯೊಂದು ಬಂದಿದೆ. ಬಳಿಕ ಅದೇ ಗ್ರಾಮದ ಪ್ರಕಾಶ್ ಸನದಿ ಎಂಬುವವರ ಮನೆಗೆ ಮೊಸಳೆ ನುಗ್ಗಿದ್ದು, ಕೂಡಲೇ ಗ್ರಾಮಸ್ಥರು ಸೇರಿ ಮೊಸಳೆಯನ್ನ ಹಗ್ಗದಿಂದ ಕಟ್ಟಿ ಸೆರೆ ಹಿಡಿದಿದ್ದಾರೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಇನ್ನು ಹತ್ತಿರದಲ್ಲಿ ಕೃಷ್ಣಾ ನದಿ ಇದ್ದು, ಇದೀಗ ಬಿರು ಬಿಸಿಲಿಗೆ ನೀರು ಬತ್ತಿದ ಹಿನ್ನೆಲೆ‌ ಆಹಾರ ಅರಸಿ ಗ್ರಾಮಕ್ಕೆ ಬಂದಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ