ಕೊನೆಯ ಓವರ್​ನಲ್ಲಿ 3 ಸಿಕ್ಸ್​ ಸಿಡಿಸಿ 3 ರನ್​ಗಳಿಂದ ಗೆದ್ದ ಹೋಬಾರ್ಟ್​ ಪಡೆ

Updated on: Jan 22, 2026 | 10:54 AM

Hobart Hurricanes vs Melbourne Stars: ಮೊದಲು ಬ್ಯಾಟ್ ಮಾಡಿದ ಹೋಬಾರ್ಟ್ ಹರಿಕೇನ್ಸ್ ತಂಡವು 9 ಓವರ್​ಗಳಲ್ಲಿ ಕಲೆಹಾಕಿದ್ದು 93 ರನ್​ಗಳು ಮಾತ್ರ. ಆದರೆ ಟಾಮ್ ಕರನ್ ಎಸೆದ 10ನೇ ಓವರ್​ನಲ್ಲಿ ಬ್ಯೂ ವೆಬ್​ಸ್ಟರ್ 3 ಭರ್ಜರಿ ಸಿಕ್ಸ್ ಚಚ್ಚುವ ಮೂಲಕ ಒಟ್ಟು 21 ರನ್ ಕಲೆಹಾಕಿತು. ಈ ಮೂಲಕ ನಿಗದಿತ 10 ಓವರ್​ಗಳಲ್ಲಿ ಹೋಬಾರ್ಟ್ ಹರಿಕೇನ್ಸ್ ತಂಡವು 114 ರನ್​ ಗಳಿಸಿತು.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್​ನ ನಾಕೌಟ್ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಮಳೆಬಾಧಿತ ಈ ಪಂದ್ಯದಲ್ಲಿ ಟಾಸ್ ಗೆದ್ದ ಮೆಲ್ಬೋರ್ನ್​ ಸ್ಟಾರ್ಸ್​ ತಂಡದ ನಾಯಕ ಮಾರ್ಕಸ್ ಸ್ಟೊಯಿನಿಸ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಹೋಬಾರ್ಟ್ ಹರಿಕೇನ್ಸ್ ತಂಡವು 9 ಓವರ್​ಗಳಲ್ಲಿ ಕಲೆಹಾಕಿದ್ದು 93 ರನ್​ಗಳು ಮಾತ್ರ. ಆದರೆ ಟಾಮ್ ಕರನ್ ಎಸೆದ 10ನೇ ಓವರ್​ನಲ್ಲಿ ಬ್ಯೂ ವೆಬ್​ಸ್ಟರ್ 3 ಭರ್ಜರಿ ಸಿಕ್ಸ್ ಚಚ್ಚುವ ಮೂಲಕ ಒಟ್ಟು 21 ರನ್ ಕಲೆಹಾಕಿತು. ಈ ಮೂಲಕ ನಿಗದಿತ 10 ಓವರ್​ಗಳಲ್ಲಿ ಹೋಬಾರ್ಟ್ ಹರಿಕೇನ್ಸ್ ತಂಡವು 114 ರನ್​ ಗಳಿಸಿತು.

ಈ ಗುರಿಯನ್ನು ಬೆನ್ನತ್ತಿದ ಮೆಲ್ಬೋರ್ನ್​ ಸ್ಟಾರ್ಸ್ ತಂಡಕ್ಕೆ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ 7 ಓವರ್​ಗಳಲ್ಲಿ 85 ರನ್​ಗಳ ಗುರಿ ನೀಡಲಾಯಿತು.

ಪ್ರತಿ ಓವರ್​ಗೆ 12 ರನ್​ಗಳ ಗುರಿ ಪಡೆದ ಮೆಲ್ಬೋರ್ನ್ ಸ್ಟಾರ್ಸ್ ತಂಡವು 6 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 59 ರನ್​ಗಳು ಮಾತ್ರ. ಅದರಂತೆ ಅಂತಿಮ ಓವರ್​ನಲ್ಲಿ 26 ರನ್​ಗಳ ಗುರಿ ಪಡೆದಿದ್ದ ಮೆಲ್ಬೋರ್ನ್​ ಸ್ಟಾರ್ಸ್ 22 ರನ್​ಗಳಿಸಿ ಕೇವಲ 3 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಇತ್ತ ಬ್ಯೂ ವೆಬ್​ಸ್ಟರ್ ಕೊನೆಯ ಓವರ್​ನಲ್ಲಿ ಬಾರಿಸಿದ 3 ಸಿಕ್ಸರ್​ಗಳು ಹೋಬಾರ್ಟ್ ಹರಿಕೇನ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಹೀಗಾಗಿ ವೆಬ್​ಸ್ಟರ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ಹು ಸಹ ನೀಡಲಾಯಿತು.