ರೋಡ್ಶೋ ವೇಳೆ ಮೀನು ಹಿಡಿದು ಕುಣಿದ ಪಟಾಕಿ ರಕ್ಷಿತಾ
ಪಟಾಕಿ ರಕ್ಷಿತಾ ಅವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದದಾರೆ. ಮೊದಲ ವಾರವೇ ಹೊರ ಹೋದ ಅವರು ನಂತರ ರನ್ನರ್ ಅಪ್ ಆದರು. ಇವರು ಕರಾವಳಿ ಪ್ರತಿಭೆ. ರಕ್ಷಿತಾ ಶೆಟ್ಟಿ ಅವರು ಈಗ ಮೀನು ಹಿಡಿದು ಕುಪ್ಪಳಿಸಿದ್ದಾರೆ. ಆ ಸಂದರ್ಭದ ವಿಡಿಯೋ ಗಮನ ಸೆಳೆದಿದೆ.
ರಕ್ಷಿತಾ ಶೆಟ್ಟಿ ಅವರು ‘ಬಿಗ್ ಬಾಸ್’ ರನ್ನರ್ ಅಪ್ ಆದ ಬಳಿಕ ಉಡುಪಿಯಲ್ಲಿ ರೋಡ್ ಶೋ ಮಾಡಿದ್ದಾರೆ. ಈ ವೇಳೆ ಅಭಿಮಾನಿಯೋರ್ವ ಮೀನು ನೀಡಿದ್ದಾನೆ. ಇದನ್ನು ಹಿಡಿದುಕೊಂಡು ರಕ್ಷಿತಾ ಶೆಟ್ಟಿ ಡ್ಯಾನ್ಸ್ ಮಾಡಿದ್ದಾರೆ. ರಕ್ಷಿತಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರ ಅಭಿಮಾನಿ ಬಳಗ ಈಗ ಹಿರಿದಾಗಿದೆ. ರಕ್ಷಿತಾ ಶೆಟ್ಟಿ ಅವರು ಪಟಾಕಿ ರಕ್ಷಿತಾ ಎಂಬ ಪಟ್ಟ ಕೂಡ ಪಡೆದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

