ವಾಸ್ತವಕ್ಕೆ ಬರಲು ಒದ್ದಾಡಿದ ಗಿಲ್ಲಿ; ಹೊಸ ವಿಡಿಯೋ ವೈರಲ್
ಗಿಲ್ಲಿ ನಟ ಅವರು ಬಿಗ್ ಬಾಸ್ ಬಳಿಕ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರು ವಿನ್ನರ್ ಅಷ್ಟೇ ಅಲ್ಲ, ದೊಡ್ಡ ಗ್ಯಾಪ್ನಲ್ಲಿ ಗೆಲುವು ಕಂಡಿದ್ದಾರೆ. ಈಗ ಅವರ ಹೊಸ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಈ ವಿಡಿಯೋದಲ್ಲಿ ಅವರು ವಾಸ್ತವಕ್ಕೆ ಬರಲು ಒದ್ದಾಡಿದ್ದಾರೆ. ಆ ವಿಡಿಯೋ ಗಮನ ಸೆಳೆದಿದೆ.
ಗಿಲ್ಲಿ ನಟ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್. ಅವರು ವಿನ್ ಆದ ಬಳಿಕ ಇದೇ ಮೊದಲ ಬಾರಿಗೆ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಈ ವೇಳೆ ‘ಇದೆಲ್ಲ ನಿಜ ಎಂದು ನಂಬೋಕೆ ಇನ್ನೂ ಸಾಧ್ಯವಾಗುತ್ತಿಲ್ಲ’ ಎಂದಿದ್ದಾರೆ. ಅಂದರೆ, ಅವರಿಗೆ ಇನ್ನೂ ವಾಸ್ತವಕ್ಕೆ ಬರೋಕೆ ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಅವರು ಎಲ್ಲಾ ಅಭಿಮಾನಿಗಳಿಗೆ, ಬೆಂಬಲಿಗರಿಗೆ, ಮಾಧ್ಯಮದವರಿಗೆ, ಸೋಶಿಯಲ್ ಮೀಡಿಯಾ ಮೀಮ್ ಪೇಜ್ಗಳಿಗೆ ಧನ್ಯವಾದ ಹೇಳಿದ್ದಾರೆ. ಆ ಸಂಧರ್ಭದ ವಿಡಿಯೋ ಮೇಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

