ಕೊನೆಯ ಓವರ್ನಲ್ಲಿ 3 ಸಿಕ್ಸ್ ಸಿಡಿಸಿ 3 ರನ್ಗಳಿಂದ ಗೆದ್ದ ಹೋಬಾರ್ಟ್ ಪಡೆ
Hobart Hurricanes vs Melbourne Stars: ಮೊದಲು ಬ್ಯಾಟ್ ಮಾಡಿದ ಹೋಬಾರ್ಟ್ ಹರಿಕೇನ್ಸ್ ತಂಡವು 9 ಓವರ್ಗಳಲ್ಲಿ ಕಲೆಹಾಕಿದ್ದು 93 ರನ್ಗಳು ಮಾತ್ರ. ಆದರೆ ಟಾಮ್ ಕರನ್ ಎಸೆದ 10ನೇ ಓವರ್ನಲ್ಲಿ ಬ್ಯೂ ವೆಬ್ಸ್ಟರ್ 3 ಭರ್ಜರಿ ಸಿಕ್ಸ್ ಚಚ್ಚುವ ಮೂಲಕ ಒಟ್ಟು 21 ರನ್ ಕಲೆಹಾಕಿತು. ಈ ಮೂಲಕ ನಿಗದಿತ 10 ಓವರ್ಗಳಲ್ಲಿ ಹೋಬಾರ್ಟ್ ಹರಿಕೇನ್ಸ್ ತಂಡವು 114 ರನ್ ಗಳಿಸಿತು.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ನ ನಾಕೌಟ್ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಮಳೆಬಾಧಿತ ಈ ಪಂದ್ಯದಲ್ಲಿ ಟಾಸ್ ಗೆದ್ದ ಮೆಲ್ಬೋರ್ನ್ ಸ್ಟಾರ್ಸ್ ತಂಡದ ನಾಯಕ ಮಾರ್ಕಸ್ ಸ್ಟೊಯಿನಿಸ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಹೋಬಾರ್ಟ್ ಹರಿಕೇನ್ಸ್ ತಂಡವು 9 ಓವರ್ಗಳಲ್ಲಿ ಕಲೆಹಾಕಿದ್ದು 93 ರನ್ಗಳು ಮಾತ್ರ. ಆದರೆ ಟಾಮ್ ಕರನ್ ಎಸೆದ 10ನೇ ಓವರ್ನಲ್ಲಿ ಬ್ಯೂ ವೆಬ್ಸ್ಟರ್ 3 ಭರ್ಜರಿ ಸಿಕ್ಸ್ ಚಚ್ಚುವ ಮೂಲಕ ಒಟ್ಟು 21 ರನ್ ಕಲೆಹಾಕಿತು. ಈ ಮೂಲಕ ನಿಗದಿತ 10 ಓವರ್ಗಳಲ್ಲಿ ಹೋಬಾರ್ಟ್ ಹರಿಕೇನ್ಸ್ ತಂಡವು 114 ರನ್ ಗಳಿಸಿತು.
ಈ ಗುರಿಯನ್ನು ಬೆನ್ನತ್ತಿದ ಮೆಲ್ಬೋರ್ನ್ ಸ್ಟಾರ್ಸ್ ತಂಡಕ್ಕೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 7 ಓವರ್ಗಳಲ್ಲಿ 85 ರನ್ಗಳ ಗುರಿ ನೀಡಲಾಯಿತು.
ಪ್ರತಿ ಓವರ್ಗೆ 12 ರನ್ಗಳ ಗುರಿ ಪಡೆದ ಮೆಲ್ಬೋರ್ನ್ ಸ್ಟಾರ್ಸ್ ತಂಡವು 6 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 59 ರನ್ಗಳು ಮಾತ್ರ. ಅದರಂತೆ ಅಂತಿಮ ಓವರ್ನಲ್ಲಿ 26 ರನ್ಗಳ ಗುರಿ ಪಡೆದಿದ್ದ ಮೆಲ್ಬೋರ್ನ್ ಸ್ಟಾರ್ಸ್ 22 ರನ್ಗಳಿಸಿ ಕೇವಲ 3 ರನ್ಗಳಿಂದ ಸೋಲೊಪ್ಪಿಕೊಂಡಿತು.
ಇತ್ತ ಬ್ಯೂ ವೆಬ್ಸ್ಟರ್ ಕೊನೆಯ ಓವರ್ನಲ್ಲಿ ಬಾರಿಸಿದ 3 ಸಿಕ್ಸರ್ಗಳು ಹೋಬಾರ್ಟ್ ಹರಿಕೇನ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಹೀಗಾಗಿ ವೆಬ್ಸ್ಟರ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ಹು ಸಹ ನೀಡಲಾಯಿತು.
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ

