ಪೆನ್​ಡ್ರೈವ್​ಗಳ ಬಗ್ಗೆ ಮಾತಾಡುವ ಸೂರಜ್ ರೇವಣ್ಣಗೆ ಆ ಕುಕೃತ್ಯ ರೆಕಾರ್ಡ್ ಮಾಡಿದ್ಯಾರು ಅಂತ ಗೊತ್ತಿಲ್ವೇ? ಶೇಯಸ್ ಪಟೇಲ್

ಅರುಣ್​ ಕುಮಾರ್​ ಬೆಳ್ಳಿ

Updated on: Jan 03, 2025 | 5:47 PM

ಆರು ಲಕ್ಷ ಮತ ಪಡೆದಿರುವ ತನಗೆ ಪೆನ್​ಡ್ರೈವ್ ಗಳನ್ನು ಬಳಸಿಕೊಂಡು ಸಂಸದನಾಗುವ ದರ್ದು ಇರಲಿಲ್ಲ, ಅಸಲಿಗೆ, ನೂರಾರು ಹೆಣ್ಣುಮಕ್ಕಳ ಬಾಳು ಹಾಳು ಮಾಡಿರುವ ಪೆನ್​ಡ್ರೈವ್ ಗಳ ಬಗ್ಗೆ ಮಾತಾಡುವುದು ತನಗೆ ಬೇಕಿಲ್ಲ, ಇಷ್ಟಕ್ಕೂ ಆ ಕುಕೃತ್ಯಗಳನ್ನು ರೆಕಾರ್ಡ್ ಮಾಡಿದ್ದು ಯಾರು? ಆ ಹೆಣ್ಣಮಕ್ಕಳ ನರಕಸದೃಶ ಬದುಕಿಗೆ ಕಾರಣರಾದವರು ಯಾರು? ಎಂದು ಶ್ರೇಯಸ್ ಕೇಳಿದರು.

ಹಾಸನ: ನಿನ್ನೆ ತಮ್ಮ ಭಾಷಣದಲ್ಲಿ ಎಮ್ಮೆಲ್ಸಿ ಸೂರಜ್ ರೇವಣ್ಣ ಮಾಡಿದ ಆರೋಪಗಳಿಗೆ ಹಾಸನದ ಕಾಂಗ್ರೆಸ್ ಸಂಸದ ಶ್ರೇಯಸ್ ಎಂ ಪಟೇಲ್ ಜವಾಬು ನೀಡಿದ್ದಾರೆ. ಸ್ಥಳೀಯ ಸಂಘಸಂಸ್ಥೆಗಳಿಂದ ಎಮ್ಮೆಲ್ಸಿಯಾಗಿ 3 ವರ್ಷ ಕಳೆದರೂ ಇದುವರೆಗೆ ಯಾವುದೇ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿಲ್ಲ, ಮೈಕ್ ಕೈಗೆ ಸಿಕ್ಕ ಕಾರಣ ಜನರ ಚಪ್ಪಾಳೆ, ಶಿಳ್ಳೆ ಗಿಟ್ಟಿಸುವ ಅಂತ ಮಾತಾಡಿದ್ದಾರೆ, ಆ್ಯಸಿಡ್ ವಿಷಯ ಇವರು ಮಾತ್ರ ಯಾಕೆ ಮಾತಾಡುತ್ತಿದ್ದಾರೆ? ಅದು ನಿಜವೇ ಆಗಿದ್ದರೆ ಹೆಚ್ ಡಿ ರೇವಣ್ಣ ಯಾಕೆ ಇದುವರೆಗೆ ಅದರ ಬಗ್ಗೆ ಮಾತಾಡಿಲ್ಲ, ತನ್ನ ಮತ್ತು ಸೂರಜ್ ಅಜ್ಜಿ ಒಟ್ಟಿಗೆ ಒಂದೇ ಕಡೆ ಬೆಳೆದವರು, ಅವರು ಯಾಕೆ ಮಾತಾಡಿಲ್ಲ ಎಂದು ಶ್ರೇಯಸ್ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ; ಜೆಡಿಎಸ್ ಎಂಎಲ್​ಸಿ ಡಾ.ಸೂರಜ್ ರೇವಣ್ಣ ಜೈಲುಪಾಲು  

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.