ವ್ಹೀಲ್ ಚೇರ್ ವ್ಯವಸ್ಥೆ ಇಲ್ಲದೆ ವೃದ್ಧೆಯನ್ನು ಕೈಯಲ್ಲಿ ಎತ್ತೊಯ್ದ ಸಂಬಂಧಿಕರು; ಇದು ಬೆಳಗಾವಿ ಬಿಮ್ಸ್‌ನ ಅವ್ಯವಸ್ಥೆ
ಬೆಳಗಾವಿಯ ಬಿಮ್ಸ್‌ನಲ್ಲಿ ಸರಿಯಾದ ಮೂಲಭೂತ ವ್ಯವಸ್ಥೆಗಳಿಲ್ಲದೆ ರೋಗಿಗಳು ಪರದಾಡುವಂತಾಗಿದೆ. ಹೌದು ವ್ಹೀಲ್ ಚೇರ್ ವ್ಯವಸ್ಥೆಯಿಲ್ಲದ ಕಾರಣ ವೃದ್ಧೆಯೊಬ್ಬರನ್ನು ವಾರ್ಡ್‌ಗೆ ಅವರ ಸಂಬಂಧಿಕರು ಕೈಯಲ್ಲೇ ಎತ್ತಿಕೊಂಡು ಹೋಗಿದ್ದು, ಈ ದೃಶ್ಯ ಮೊಬೈಲ್‌ನಲ್ಲಿ ನಡೆಯಾಗಿದೆ. ಈ ಅವ್ಯವಸ್ಥೆಯ ಕಾರಣ ಸಾರ್ವಜನಿಕರು ಬಿಮ್ಸ್ ಆಡಳಿತ ವ್ಯವಸ್ಥೆಯ ವಿರುದ್ಧ ಕಿಡಿ ಕಾರಿದ್ದಾರೆ.
ಬೆಳಗಾವಿ, ಸೆಪ್ಟೆಂಬರ್ 17: ಬೆಳಗಾವಿಯ ಬಿಮ್ಸ್ (BIMS) ಅವ್ಯವಸ್ಥೆಗಳ ಆಗಾರವಾಗಿದೆ. ಈ ಆಸ್ಪತ್ರೆಯಲ್ಲಿ ಒಂದಲ್ಲಾ ಒಂದು ಎಡವಟ್ಟುಗಳು ನಡೆಯುತ್ತಲೇ ಇರುತ್ತವೆ. ಇದೀಗ ಇಲ್ಲಿ ಸರಿಯಾದ ಮೂಲಭೂತ ವ್ಯವಸ್ಥೆಯ ಕೊರತೆಯಿಂದಾಗಿ ರೋಗಿಗಳು ಪರದಾಡುವಂತಾಗಿದೆ. ಹೌದು ವ್ಹೀಲ್ ಚೇರ್ ವ್ಯವಸ್ಥೆಯಿಲ್ಲದೆ, ಆಸ್ಪತ್ರೆ ಸಿಬ್ಬಂದಿಗಳ ಸರಿಯಾದ ಸಹಕಾರವಿಲ್ಲದೆ ರೋಗಿಗಳು ಪರದಾಡುತ್ತಿದ್ದು, ನಡೆಯಲು ಸಾಧ್ಯವಾಗದಂತಹ ವೃದ್ಧೆಯೊಬ್ಬರನ್ನು ವ್ಹೀಲ್ ಚೇರ್ ಇಲ್ಲದ ಕಾರಣ ಅವರ ಸಂಬಂಧಿಕರೇ ವಾರ್ಡ್‌ಗೆ ಎತ್ತಿಕೊಂಡು ಹೋಗಿದ್ದಾರೆ. ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಈ ಅವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ಆಕ್ರೋಶವನ್ನು ಹೊರಹಾಕಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
