ಅಪ್ರಾಪ್ತೆ ಮನೆ ಮುಂದೆ ಲಾಂಗು ಮಚ್ಚು ಹಿಡಿದು ಗಲಾಟೆ ಮಾಡಿದ ಪಾಗಲ್ ಪ್ರೇಮಿ ಅರೆಸ್ಟ್
ಪಾಗಲ್ ಪ್ರೇಮಿಯೊಬ್ಬ ತನ್ನ ಸ್ನೇಹಿತರ ಜೊತೆ ಸೇರಿ ಮುಂಜಾನೆ ವೇಳೆ ಅಪ್ರಾಪ್ತೆಯ ಮನೆ ಮುಂದೆ ಲಾಂಗು ಮಂಚ್ಚು ಹಿಡಿದು ಗಲಾಟೆ ಮಾಡಿದಂತಹ ಘಟನೆ ತುಮಕೂರಿನ ಕೊರಟೆಗೆರೆ ತಾಲೂಕಿನ ಗಂಟಿಗಾನ ಹಳ್ಳಿಯಲ್ಲಿ ನಡೆದಿದೆ. ಸೆಪ್ಟೆಂಬರ್ 13 ರಂದು ಬೆಳಗಿನ ಜಾವ 5.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಸದ್ಯ ಪಾಗಲ್ ಪ್ರೇಮಿ ಮತ್ತು ಆತನ ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.
ತುಮಕೂರು, ಸೆಪ್ಟೆಂಬರ್ 17: ಪ್ರೀತಿ (Love) ನಿರಾಕರಿಸಿದ್ದಕ್ಕೆ ಅಥವಾ ಇನ್ನೇನೋ ಕಾರಣಕ್ಕೆ ಪಾಗಲ್ ಪ್ರೇಮಿಗಳು ಹುಚ್ಚಾಟ ಮೆರೆಯುವಂತಹ ಘಟನೆಗಳ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತವೆ. ಅಂತಹದ್ದೇ ಘಟನೆಯೊಂದು ತುಮಕೂರಿನ ಕೊರಟೆಗೆರೆ ತಾಲೂಕಿನ ಗಂಟಿಗಾನ ಹಳ್ಳಿಯಲ್ಲಿ ನಡೆದಿದೆ. ಪಿಯುಸಿ ಓದುತ್ತಿದ್ದ ಯುವತಿಗೆ ಮೆಸೇಜ್ ಮಾಡಿದ್ದು ತಪ್ಪು ಎಂದು ಆಕೆಯ ಪೋಷಕರು ಬುದ್ಧಿಮಾತು ಹೇಳಿದ್ದಕ್ಕೆ ಪಾಗಲ್ ಪ್ರೇಮಿ ತನ್ನ ಮೂವರು ಸ್ನೇಹಿತರ ಜೊತೆಗೂಡಿ ಸೆಪ್ಟೆಂಬರ್ 13 ರಂದು ಬೆಳಗಿನ ಜಾವ 5.30 ರ ಸುಮಾರಿಗೆ ಲಾಂಗು ಮಚ್ಚು ಹಿಡಿದು ಗಲಾಟೆ ಮಾಡಿದ್ದಾನೆ. ಹೀಗೆ ಪುಂಡಾಟಿಕೆ ಮೆರೆದ ಪಾಗಲ್ ಪ್ರೇಮಿ ಹಾಗೂ ಆತನ ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!

