ಬೆಳಗಾವಿಯಲ್ಲಿ ಪ್ರತ್ಯಕ್ಷವಾದ ಚಿರತೆಗೊಂದು ಆಧಾರ್ ಕಾರ್ಡ್!
ಬೆಳಗಾವಿಯ ಜನ ಅದಕ್ಕೊಂದು ಆಧಾರ್ ಕಾರ್ಡ್ ಸೃಷ್ಟಿಸಿ, ನಾ ಬೆಳಗಾವಿ ಬಿಟ್ಟು ಹೋಗಲಾರೆ, ವಿನಾಯಕ ಚತುರ್ಥಿ ಮುಗಿಸಿಕೊಂಡು ಹೋಗ್ತೇನೆ ಅಂತ ಶೀರ್ಷಿಕೆ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ಸಖತ್ ಟ್ರೋಲ್ ಆಗಿದೆ
ಬೆಳಗಾವಿ: ಸುಮಾರು ಮೂರು ವಾರಗಳ ಹಿಂದೆ ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ (Golf Course) ಚಿರತೆಯೊಂದು ಪ್ರತ್ಯಕ್ಷವಾಗಿತ್ತು. ಅದನ್ನು ಅರಣ್ಯ ಇಲಾಖೆಯವರು ಇದುವರೆಗೆ ಸೆರೆ ಹಿಡಿದಿಲ್ಲ ಮತ್ತು ಕಾಡಿಗೆ ಅಟ್ಟಿದ ಬಗ್ಗೆ ಮಾಹಿತಿಯೂ ಇಲ್ಲ. ಹಾಗಾಗಿ, ಬೆಳಗಾವಿಯ ಜನ ಅದಕ್ಕೊಂದು ಆಧಾರ್ ಕಾರ್ಡ್ ಸೃಷ್ಟಿಸಿ, ನಾ ಬೆಳಗಾವಿ ಬಿಟ್ಟು ಹೋಗಲಾರೆ, ವಿನಾಯಕ ಚತುರ್ಥಿ ಮುಗಿಸಿಕೊಂಡು ಹೋಗ್ತೇನೆ ಅಂತ ಶೀರ್ಷಿಕೆ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ಸಖತ್ ಟ್ರೋಲ್ ಆಗಿದೆ ಮಾರಾಯ್ರೇ.