ನಾಳೆಯಿಂದ ಚಳಿಗಾಲದ ಅಧಿವೇಶನ: ಬಣ್ಣಬಣ್ಣದ ಲೈಟಿಂಗ್ಸ್​​​ನಿಂದ ಕಂಗೊಳಿಸಿದ ಸುವರ್ಣ ಸೌಧ​​

Updated By: ಗಂಗಾಧರ​ ಬ. ಸಾಬೋಜಿ

Updated on: Dec 07, 2025 | 10:12 PM

ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿಯ ಸುವರ್ಣಸೌಧ ಸಜ್ಜಾಗಿದೆ. ನಾಳೆಯಿಂದ ಡಿಸೆಂಬರ್‌ 19ರವರೆಗೆ ಚಳಿಗಾಲದ ಅಧಿವೇಶನ ನಡೆಯಲಿದೆ. ಇಂದು ವಿಧಾನಸಭೆ ಕಾರ್ಯದರ್ಶಿ ಎಂ.ಕೆ ವಿಶಾಲಾಕ್ಷಿ ನೇತೃತ್ವದಲ್ಲಿ ಪರಿಶೀಲನೆ ಮಾಡಲಾಯಿತು. ಈ ಮಧ್ಯೆ ಸುವರ್ಣ ವಿಧಾನಸೌಧಕ್ಕೆ ಬಣ್ಣ ಬಣ್ಣದ ಲೈಟಿಂಗ್ಸ್ ಅಳವಡಿಸಲಾಗಿದ್ದು, ಮಿಂಚುತ್ತಿದೆ. ವಿಡಿಯೋ ನೋಡಿ.

ಬೆಳಗಾವಿ, ಡಿಸೆಂಬರ್​ 07: ಕುಂದಾನಗರಿ ಬೆಳಗಾವಿಯಲ್ಲಿ ನಾಳೆಯಿಂದ (ಡಿ.08) ಚಳಿಗಾಲದ ಅಧಿವೇಶನ ಶುರುವಾಗಲಿದೆ. ಈಗಾಗಲೇ ಚಳಿಗಾಲದ ಅಧಿವೇಶನಕ್ಕೆ ಸುವರ್ಣಸೌಧ ಸಜ್ಜಾಗಿ ನಿಂತಿದೆ. ಸದ್ಯ ಸುವರ್ಣ ವಿಧಾನಸೌಧ ಬಣ್ಣಬಣ್ಣದ ಲೈಟಿಂಗ್ಸ್​ಗಳಿಂದ ಮಿಂಚುತ್ತಿದೆ. ಇದರ ನಡುವೆ ಗುಪ್ತಚರ ಇಲಾಖೆಯ ಅದೊಂದು ಮಾಹಿತಿ ಮೇರೆಗೆ ಈ ಬಾರಿ ಖಾಕಿ ಭದ್ರತೆ ಹೆಚ್ಚಳವಾಗಿದೆ. ಡಿ.19ರವರೆಗೆ ಅಧಿವೇಶನ ನಡೆಯಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Dec 07, 2025 10:12 PM