ಕಣ್ಣಿನ ಆಪರೇಷನ್ಗೆ ವರದಾನವಾದ ಗೃಹಲಕ್ಷ್ಮಿ ಹಣ
ಬೆಳಗಾವಿಯ ಅನಗೋಳ ನಗರದಲ್ಲಿ ಅನಿತಾ ಎಂಬುವರು ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದರು. ಇದೇ ಹಣದಲ್ಲಿ ಅನಿತಾ ಅವರು ಪತಿ ಚಂದ್ರಶೇಖರ್ ಅವರ ಕಣ್ಣಿನ ಆಪರೇಷನ್ ಮಾಡಿಸಿದ್ದಾರೆ. ದಂಪತಿ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಮರ್ಪಿಸಿದ್ದಾರೆ.
ಬೆಳಗಾವಿ, ಸೆಪ್ಟೆಂಬರ್ 02: ಕರ್ನಾಟಕ ಕಾಂಗ್ರೆಸ್ ಸರ್ಕಾರದ (Congress Government) ಗೃಹಲಕ್ಷ್ಮಿ (Gruha Lakshmi) ಹಣದಿಂದ ಮಹಿಳೆಯೊಬ್ಬರು ಪತಿಯ ಕಣ್ಣಿನ ಆಪರೇಷನ್ (Eye Operation) ಮಾಡಿಸಿದ್ದಾರೆ. ಬೆಳಗಾವಿಯ ಅನಗೋಳ ನಗರದಲ್ಲಿ ಅನಿತಾ ಮತ್ತು ಚಂದ್ರಶೇಖರ್ ಬಡಿಗೇರ ದಂಪತಿ ವಾಸವಾಗಿದ್ದಾರೆ. ಅನಿತಾ ಪತಿ ಚಂದ್ರಶೇಖರ್ ಅವರಿಗೆ ದೃಷ್ಟಿ ದೋಷದ ಸಮಸ್ಯೆ ಕಾಡುತ್ತಿತ್ತು. ಆಪರೇಷನ್ ಮಾಡಿಸಲು ನಿರ್ಧರಿಸಿದರು. ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣವನ್ನು ಅನಿತಾ ಕೂಡಿಟ್ಟಿದ್ದರು. ಗೃಹಲಕ್ಷ್ಮಿಯಿಂದ ಬಂದ 18 ಸಾವಿರ ರೂ. ಮತ್ತು ತನ್ನ ಬಳಿ ಇದ್ದ 10 ಸಾವಿರ ಹಣ ಸೇರಿಸಿ ಪತಿ ಚಂದ್ರಶೇಖರ್ ಅವರ ಕಣ್ಣಿನ ಆಪರೇಷನ್ ಮಾಡಿಸಿದ್ದಾರೆ. ಆಪರೇಷನ್ ಸಕ್ಸಸ್ ಆಗಿದೆ. ಪತಿಯ ಕಣ್ಣಿನ ಆಪರೇಷನ್ಗೆ ಗೃಹಲಕ್ಷ್ಮಿ ಹಣ ನೆರವಾಗಿದ್ದಕ್ಕೆ ದಂಪತಿಗಳು ವಿಡಿಯೋ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ