Karnataka Gruha Jyothi Scheme: ಗೃಹ ಜ್ಯೋತಿ ಯೋಜನೆಯಡಿ ಸೊನ್ನೆ ಕರೆಂಟ್ ಬಿಲ್ ಕೊಟ್ಟಿದ್ದಕ್ಕೆ ಬೆಳಗಾವಿ ಮಹಿಳೆ ಫುಲ್ ಖುಷ್!

| Updated By: ಸಾಧು ಶ್ರೀನಾಥ್​

Updated on: Aug 01, 2023 | 4:41 PM

ಬೆಳಗಾವಿ: ಕೆಲವೊಮ್ಮೆ ಎರಡು ತಿಂಗಳು ಮೂರು ತಿಂಗಳು ಬಿಲ್ ಕಟ್ಟಲು ಆಗುತ್ತಿರಲಿಲ್ಲ. ಈಗ ವಿದ್ಯುತ್ ಉಚಿತ ಆಗಿದ್ದರಿಂದ ಅನುಕೂಲ ಜತೆಗೆ ಉಳಿತಾಯ ಕೂಡ ಆಗಿದೆ ಎಂದು ಮಹಿಳೆಯರು ಸಿದ್ದರಾಮಯ್ಯ ಸರ್ಕಾರಕ್ಕೆ ಕೈ ಮುಗಿದು ಧನ್ಯವಾದ ಹೇಳಿದರು.

ಬೆಳಗಾವಿ, ಆಗಸ್ಟ್​ 1: ಗೃಹ ಜ್ಯೋತಿ (Karnataka Gruha Jyothi Scheme) ಯೋಜನೆ ಫಲಾನುಭವಿಗಳಿಗೆ ಇಂದಿನಿಂದ ಶೂನ್ಯ ಬಿಲ್ ವಿತರಣೆಯಾಗಿದೆ. ಬೆಳಗಾವಿಯ (Belgavi) ಶಿವಾಜಿ ನಗರದ ನಿವಾಸಿಗಳಿಗೆ ಹೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ವಿತರಣೆ ಮಾಡಿದರು. ಹೆಸ್ಕಾಂ ಎಇಇ ಅಶ್ವಿನ್ ಎಂ. ಶಿಂಧೆ, ಅಕೌಂಟ್ ಆಫೀಸರ್ ಬಿ.ಬಿ ಮೊಳಕೆ, ತಾಂತ್ರಿಕ ಸಿಬ್ಬಂದಿ ಹಾಗೂ ಮಾಪಕ ಓದುಗರಿಂದ ವಿತರಣೆ ಕಾರ್ಯ ನಡೆಯಿತು. ಇಂದು ಮೊದಲ ದಿನವಾಗಿದ್ದರಿಂದ ಹೆಸ್ಕಾಂ ಅಧಿಕಾರಿಗಳು.ತಮ್ಮ ತಂಡದೊಂದಿಗೆ ಬಂದು ಬಿಲ್ ವಿತರಣೆ ಮಾಡ್ತಿದಾರೆ. ಯಾವುದೇ ತಾಂತ್ರಿಕ ದೋಷವಿಲ್ಲದೇ ಸುಲಭವಾಗಿ ಶೂನ್ಯ ಬಿಲ್ (zero current bill) ವಿತರಣೆ ನಡೆದಿದೆ.

ಝಿರೋ ವಿದ್ಯುತ್ ಬಿಲ್ ಕಂಡು ಗ್ರಾಹಕರು ಸಂತಸ ವ್ಯಕ್ತಪಡಿಸಿದರು. ಇದೇ ಮೊದಲ ಬಾರಿಗೆ ಬಿಲ್ ಕಟ್ಟುತ್ತಿಲ್ಲ ಬಹಳ ಖುಷಿಯಾಗಿದೆ. ಈ ಹಿಂದೆ ಐದನೂರು ರೂಪಾಯಿವರೆಗೂ ಬಿಲ್ ಕಟ್ಟುತ್ತಿದ್ದೆವು. ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಕಷ್ಟು ತೊಂದರೆ ಆಗ್ತಿತ್ತು. ಕೆಲವೊಮ್ಮೆ ಎರಡು ತಿಂಗಳು ಮೂರು ತಿಂಗಳು ಬಿಲ್ ಕಟ್ಟಲು ಆಗುತ್ತಿರಲಿಲ್ಲ. ಈಗ ವಿದ್ಯುತ್ ಉಚಿತ ಆಗಿದ್ದರಿಂದ ಅನುಕೂಲ ಜತೆಗೆ ಉಳಿತಾಯ ಕೂಡ ಆಗಿದೆ ಎಂದು ಮಹಿಳೆಯರು ಸಿದ್ದರಾಮಯ್ಯ ಸರ್ಕಾರಕ್ಕೆ ಕೈ ಮುಗಿದು ಧನ್ಯವಾದ ಹೇಳಿದರು. ಬೆಳಗಾವಿ ನಗರದಲ್ಲೇ 1ಲಕ್ಷ 68 ಸಾವಿರ ಗೃಹ ಬಳಕೆ ಗ್ರಾಹಕರು ಇದ್ದಾರೆ. ಈ ಪೈಕಿ 1ಲಕ್ಷ 6 ಸಾವಿರ ಗ್ರಾಹಕರು ಗೃಹ ಜ್ಯೋತಿ ಫಲಾನುಭವಿಗಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on