ಪಂಚಕನ್ಯಾ ಸ್ಮರಣೆಯ ಫಲವೇನು? ಯಾರು ಈ ಪಂಚ ಕನ್ಯೆಯರು

|

Updated on: Jul 25, 2024 | 7:08 AM

ಅಹಲ್ಯೆ, ದ್ರೌಪದಿ, ಸೀತೆ, ತಾರಾ ಮತ್ತು ಮಂಡೋದರಿ ಎಂಬ ಪಂಚ ಕನ್ಯೆಯರನ್ನು ಪ್ರತಿ ದಿನ ನೆನಪಿಸಿಕೊಳ್ಳುವುದರಿಂದ ಜೀವನದಲ್ಲಿ ಬಹಳಷ್ಟು ಬದಲಾವಣೆಗಳು ಆಗುತ್ತವೆ. ಸುಖ-ಶಾಂತಿ ನೆಲೆಸುತ್ತದೆ. ಜೀವನ ಸುಧಾರಣೆ ಕಾಣಬಹುದು. ಮತ್ತಷ್ಟು ಮಾಹಿತಿಯನ್ನು ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ.

ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ
ಪಂಚ ಕನ್ಯಾಃ ಸ್ಮರೇನ್ನಿತ್ಯಂ ಸರ್ವ ಪಾತಕನಾಶನಂ ||

ಬೆಳಗ್ಗೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಪೂರ್ವಾಭಿಮುಖ ಅಥವ ಉತ್ತರಾಭಿಮುಖವಾಗಿ ಪ್ರತಿ ದಿನ ಈ ಮಂತ್ರವನ್ನು ಜಪ ಮಾಡುವುದರಿಂದ ಅನೇಕ ಲಾಭಗಳಿವೆ. ಈ ಪಂಚಕನ್ಯಾ ಸ್ಮರಣೆ ಮಾಡುವುದರಿಂದ ಕಂಕಣ ಭಾಗ್ಯ, ಮಕ್ಕಳ ಭಾಗ್ಯ, ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ.

ಅಹಲ್ಯೆ, ದ್ರೌಪದಿ, ಸೀತೆ, ತಾರಾ ಮತ್ತು ಮಂಡೋದರಿ ಎಂಬ ಪುರಾಣ ಪ್ರಸಿದ್ಧ ಮಹಿಳಾ ಆದರ್ಶಕರನ್ನು ಪ್ರತಿನಿತ್ಯವೂ ಸ್ಮರಿಸುವುದರಿಂದ ದೊಡ್ಡ ದೊಡ್ಡ ಪಾಪಗಳೂ ನಾಶವಾಗುತ್ತವೆ. ಪುಣ್ಯ ಸಂಪಾದನೆಯಾಗುತ್ತದೆ. ಇನ್ನು ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ಮತ್ತಷ್ಟು ತಿಳಿಸಿಕೊಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Follow us on