Daily Devotional: ಪಾದರಸ ಶಿವಲಿಂಗವನ್ನ ಪೂಜಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಪಾದರಸ ಶಿವಲಿಂಗವನ್ನ ಪೂಜಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಸೃಷ್ಟಿ, ಸ್ಥಿತಿ ಮತ್ತು ಲಯಕ್ಕೆ ಅಧಿಪತಿಗಳಾದ ಬ್ರಹ್ಮ, ವಿಷ್ಣು ಮತ್ತು ಶಿವನ ಅನುಗ್ರಹವು ಜೀವನದಲ್ಲಿ ಮಹತ್ವಪೂರ್ಣವಾಗಿದೆ. ಶಿವನು ಅಭಿಷೇಕ ಪ್ರಿಯನಾಗಿದ್ದು, ವಿವಿಧ ಶಿವಲಿಂಗಗಳ ಪೂಜೆಯಿಂದ ಆತನ ಕೃಪೆಗೆ ಪಾತ್ರರಾಗಬಹುದು. ಅಂತಹ ಶಿವಲಿಂಗಗಳಲ್ಲಿ ಪಾದರಸ ಶಿವಲಿಂಗವು ಬಹು ವಿಶೇಷ ಸ್ಥಾನವನ್ನು ಪಡೆದಿದೆ. ಇದು ತಕ್ಷಣವೇ ಪರಿಪೂರ್ಣ ಶಿವಾನುಗ್ರಹವನ್ನು ಕರುಣಿಸುತ್ತದೆ ಎಂದು ಹೇಳಲಾಗುತ್ತದೆ.

ಯಾರು ಸಂಕಷ್ಟದಲ್ಲಿದ್ದಾರೋ, ದಾರಿ ಕಾಣದೆ ಇರುವವರಿಗೆ ಪಾದರಸ ಶಿವಲಿಂಗ ಪೂಜೆಯು ವಿಶೇಷ ಪರಿಹಾರವಾಗಿದೆ. ಸತತವಾಗಿ 48 ದಿನಗಳ ಕಾಲ ಪಾದರಸ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ಎಂತಹ ಸಂಕಷ್ಟಗಳೂ ದೂರವಾಗಿ ಶುಭವಾಗುತ್ತದೆ. ಪ್ರತಿ ಸೋಮವಾರ ಸಂಧ್ಯಾಕಾಲದಲ್ಲಿ ಈ ಶಿವಲಿಂಗಕ್ಕೆ ಅಭಿಷೇಕ ಮಾಡಿ, ಆ ತೀರ್ಥವನ್ನು ಸೇವಿಸುವುದರಿಂದ ಹಿಂದಿನ ಜನ್ಮದ ಕರ್ಮಗಳು ಮತ್ತು ಪಾಪಗಳು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ. ಬಂಗಾರದ ಶಿವಲಿಂಗ ಪೂಜೆಗಿಂತ ಒಂದು ಕೋಟಿ ಪಟ್ಟು ಹೆಚ್ಚಿನ ಫಲವನ್ನು ಪಾದರಸ ಶಿವಲಿಂಗ ಪೂಜೆ ನೀಡುತ್ತದೆ ಎಂದು ಪುರಾಣಗಳು ಹೇಳುತ್ತವೆ. ಈ ಪೂಜೆಯಿಂದ ಸರ್ವ ದೇವತೆಗಳ ಆಶೀರ್ವಾದ, ಲಕ್ಷ್ಮಿ-ಕುಬೇರರ ಅನುಗ್ರಹವೂ ಲಭಿಸುತ್ತದೆ. ಮನೆಯಲ್ಲೂ ಇದನ್ನು ಪ್ರತಿಷ್ಠಾಪಿಸಬಹುದು ಹಾಗೂ ಅಭಿಷೇಕದ ನೀರನ್ನು ಅನಾರೋಗ್ಯ ಇರುವವರು ಸ್ನಾನಕ್ಕೆ ಬಳಸಬಹುದು. ಕೇವಲ ನೀರಿನ ಅಭಿಷೇಕದಿಂದಲೇ ಶಿವನ ಕೃಪೆಗೆ ಪಾತ್ರರಾಗಬಹುದು ಎಂದು ಗುರೂಜಿ ವಿವರಿಸಿದ್ದಾರೆ.