ಉಪ್ಪಿನ ದೀಪ ಹೇಗೆ ಹಚ್ಚಬೇಕು? ಅದರಿಂದಾಗುವ ಲಾಭಗಳೇನು?
ಮನೆಯ ದೇವರ ಕೊಣೆಯಲ್ಲಿ ಅಥವಾ ದೇವಸ್ಥಾನದಲ್ಲಿ ತುಪ್ಪ, ಎಣ್ಣೆ, ಸಾಸಿವೆ, ಎಳ್ಳು, ಮಲ್ಲಿಗೆಯ ಎಣ್ಣೆಯ ದೀಪ ಅಥವಾ ಉಪ್ಪಿನ ದೀಪವನ್ನು ಹಚ್ಚುವ ಪದ್ಧತಿ ಇದೆ. ಈ ರೀತಿಯಾಗಿ ಪ್ರತಿಯೊಂದು ರೀತಿಯ ದೀಪವನ್ನು ಸುಡುವುದು ವಿಭಿನ್ನ ಮಹತ್ವವನ್ನು ಹೊಂದಿದೆ. ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಉಪ್ಪಿನ ದೀಪ ಹಚ್ಚುವುದು ಹೇಗೆ? ಅದರಿಂದಾಗುವ ಪ್ರಯೋಜನಗಳ ಬಗ್ಗೆ ಈ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ.
ಸಾಮಾನ್ಯವಾಗಿ ಎಣ್ಣೆ ದೀಪ, ತುಪ್ಪದ ದೀಪ, ನಿಂಬೆ ದೀಪ ಹಚ್ಚುವುದರಿಂದಾಗುವ ಪ್ರಯೋಜನಗಳ ಬಗ್ಗೆ ನಿಮಗೆಲ್ಲ ಕೊಂಚವಾದರೂ ಮಾಹಿತಿ ಇದ್ದೇ ಇರುತ್ತೆ. ಆದರೆ ಈ ವಿಡಿಯೋದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಉಪ್ಪಿನ ದೀಪ ಹಚ್ಚುವುದು ಹೇಗೆ? ಅದರಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ.
ಯಾವುದೇ ದೀಪ ಹಚ್ಚಬೇಕಾದ್ರೆ ಅದನ್ನ ನೆಲದ ಮೇಲಿಡದೇ, ತಾಮ್ರ, ಬೆಳ್ಳಿ, ಮಣ್ಣು ಅಥವಾ ಪಂಚಲೋಹದ ತಟ್ಟೆಯ ಮೇಲೆ ಇರಿಸುವುದು ಉತ್ತಮ. ಉಪ್ಪಿನ ದೀಪವನ್ನ ಕೂಡ ತಾಮ್ರ, ಬೆಳ್ಳಿ, ಮಣ್ಣು, ಪಂಚಲೋಹದ ತಟ್ಟೆ ಅಥವಾ ವೀಳ್ಯದೆಲೆ ಮೇಲೆ ಅಕ್ಕಿ ಹಾಕಿ ಇರಿಸಬೇಕು. ಉಪ್ಪಿನ ದೀಪ ಹಚ್ಚಲು ನಮಗೆ 2 ಹಣತೆ ಬೇಕಾಗುತ್ತೆ. ಹಣತೆಗೆ ಅರಿಶಿಣ ಹಚ್ಚಿ, ಹಣತೆಯ ನಾಲ್ಕು ಬದಿಗೆ ಕುಂಕುಮದ ಬೊಟ್ಟನ್ನಿರಿಸಿ, ತಟ್ಟೆಯ ಮೇಲಿರಿಸಿ ಹಣತೆಯಲ್ಲಿ ದಪ್ಪ ಉಪ್ಪನ್ನ ಹಾಕಿ ಅದರ ಅಕ್ಕ ಪಕ್ಕ ಕೆಂಪು ಮತ್ತು ಅರಿಶಿನ ಬಣ್ಣದ ಹೂವನ್ನ ಇರಿಸಬೇಕು. ಬಳಿಕ ಈ ದೊಡ್ಡದಾದ ಮಣ್ಣಿನ ಹಣತೆಯ ಮೇಲೆ ಚಿಕ್ಕ ಹಣತೆಯನ್ನ ಇರಿಸಿ, ಇದಕ್ಕೂ ಅರಿಶಿನ ಕುಂಕುಮ ಹಚ್ಚಿ. ಅದಕ್ಕೆ ತುಪ್ಪ ಅಥವಾ ಎಳ್ಳೆಣ್ಣೆ ಹಾಕಿ, ಜೋಡಿ ಬತ್ತಿಗಳನ್ನ ಹಾಕಿ ದೀಪ ಹಚ್ಚಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ