‘ನಾವು ಮಾರ್ಟಿನ್ ರೀ ಶೂಟ್ ಮಾಡಿಲ್ಲ’; ನೇರವಾಗಿ ಹೇಳಿದ ಎಪಿ ಅರ್ಜುನ್
‘ಮಾರ್ಟಿನ್’ ಜೊತೆ ತೆಲುಗಿನ ಜೂನಿಯರ್ ಎನ್ಟಿಆರ್ ನಟನೆಯ ‘ದೇವರ’ ಕೂಡ ರಿಲೀಸ್ ಆಗುತ್ತಿದೆ. ಹೀಗಾಗಿ, ಬಾಕ್ಸ್ ಆಫೀಸ್ನಲ್ಲಿ ಕ್ಲ್ಯಾಶ್ ಆಗೋದು ಪಕ್ಕಾ ಎನ್ನುತ್ತಿದ್ದಾರೆ ಕೆಲವರು. ಇದಕ್ಕೆ ನಿರ್ದೇಶಕ ಎಪಿ ಅರ್ಜುನ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವಿಜಯ ದಶಮಿ ಪ್ರಯುಕ್ತ ‘ಮಾರ್ಟಿನ್’ ಸಿನಿಮಾ (Martin Movie) ಅಕ್ಟೋಬರ್ 11ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ವಿಶೇಷ ಎಂದರೆ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಇದೇ ಸಮಯದಲ್ಲಿ ತೆಲುಗಿನ ಜೂನಿಯರ್ ಎನ್ಟಿಆರ್ ನಟನೆಯ ‘ದೇವರ’ ಕೂಡ ರಿಲೀಸ್ ಆಗುತ್ತಿದೆ. ಹೀಗಾಗಿ, ಬಾಕ್ಸ್ ಆಫೀಸ್ನಲ್ಲಿ ಕ್ಲ್ಯಾಶ್ ಆಗೋದು ಪಕ್ಕಾ ಎನ್ನುತ್ತಿದ್ದಾರೆ ಕೆಲವರು. ಇದಕ್ಕೆ ನಿರ್ದೇಶಕ ಎಪಿ ಅರ್ಜುನ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ವಿಜಯ ದಶಮಿ ಅನ್ನೋದು ಕನ್ನಡ ನಾಡಿನ ಅದ್ಭುತ ಹಬ್ಬ. ವಿಜಯದಶಮಿಗೆ ನಾವೇನಾದರೂ ಕೊಡಬೇಕು. ನಮ್ಮ ತನದಿಂದ ನಮ್ಮ ಸಿನಿಮಾ ಬರುತ್ತಿದೆ. ನಮ್ಮ ಇಂಡಿಯಾದಲ್ಲಿ ಎರಡು ಸಿನಿಮಾ ಪ್ರದರ್ಶಿಸುವ ತಾಕತ್ತಿದೆ’ ಎಂದಿದ್ದಾರೆ ಅವರು. ಈ ಸಿನಿಮಾ ರೀಶೂಟ್ ಆಗಿದೆ ಎನ್ನೋ ಮಾತಿದೆ. ಇದನ್ನು ಅವರು ಅಲ್ಲಗಳೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.