‘ದೇವರ’ ಚಿತ್ರದ ವಿಎಫ್​ಎಕ್ಸ್ ಕೆಲಸಕ್ಕೆ ಭರ್ಜರಿ ಬಜೆಟ್ ಮೀಸಲಿಟ್ಟ ಜೂನಿಯರ್ ಎನ್​ಟಿಆರ್

‘ದೇವರ’ ಚಿತ್ರದ ವಿಎಫ್​ಎಕ್ಸ್ ಕೆಲಸಗಳಿಗೆ 50 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಮೂಲಗಳ ಪ್ರಕಾರ ಈ ಸಿನಿಮಾದ ಬಜೆಟ್ ಸರಿಸುಮಾರು 150 ಕೋಟಿ ರೂಪಾಯಿ ಇದೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಸಿನಿಮಾದ ವಿಎಫ್​ಎಕ್ಸ್ ದೃಶ್ಯಗಳನ್ನು ನೋಡಲು ಅಭಿಮಾನಿಗಳು ಕಾದಿದ್ದಾರೆ.

‘ದೇವರ’ ಚಿತ್ರದ ವಿಎಫ್​ಎಕ್ಸ್ ಕೆಲಸಕ್ಕೆ ಭರ್ಜರಿ ಬಜೆಟ್ ಮೀಸಲಿಟ್ಟ ಜೂನಿಯರ್ ಎನ್​ಟಿಆರ್
ಜೂನಿಯರ್​ ಎನ್​ಟಿಆರ್​
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on: Aug 29, 2023 | 5:42 PM

ಟಾಲಿವುಡ್​ನ ಖ್ಯಾತ ನಿರ್ದೇಶಕ ಎಸ್​ಎಸ್​ ರಾಜಮೌಳಿ ಅವರು ಅದ್ಭುತ ಕಲ್ಪನೆ ಇಟ್ಟುಕೊಂಡು ಸಿನಿಮಾ ಮಾಡುತ್ತಾರೆ. ‘ಬಾಹುಬಲಿ’, ‘ಈಗ’, ‘ಆರ್​ಆರ್​ಆರ್’ ಸಿನಿಮಾಗಳು ಇದಕ್ಕೆ ಸಾಕ್ಷಿ. ಅವರ ಕಲ್ಪನೆಯನ್ನು ಮತ್ತಷ್ಟು ಸುಂದರಗೊಳಿಸೋಕೆ ಸಹಕಾರಿ ಆಗೋದು ವಿಎಫ್​ಎಕ್ಸ್. ಈಗ ಜೂನಿಯರ್ ಎನ್​ಟಿಆರ್ (Jr NTR) ಅವರು ಕೂಡ ತಮ್ಮ ಸಿನಿಮಾ ತಂಡಕ್ಕೆ ವಿಎಫ್​ಎಕ್ಸ್​ಗೆ (VFX) ಹೆಚ್ಚು ಒತ್ತು ನೀಡುವಂತೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಹೌದು, ಜೂನಿಯರ್ ಎನ್​ಟಿಆರ್ ನಟನೆಯ ‘ದೇವರ’ (Devara) ಚಿತ್ರದ ವಿಎಫ್​​ಎಕ್ಸ್​ ಕೆಲಸಕ್ಕೆ ಭರ್ಜರಿ ಬಜೆಟ್ ಮೀಸಲಿಡಲಾಗುತ್ತಿದೆ.

ಜೂನಿಯರ್ ಎನ್​ಟಿಆರ್ ಅವರ 30ನೇ ಚಿತ್ರಕ್ಕೆ ‘ದೇವರ’ ಶೀರ್ಷಿಕೆ ಫಿಕ್ಸ್ ಆಗಿದೆ. ರಾಜಮೌಳಿ ಜೊತೆ ಒಳ್ಳೆಯ ನಂಟು ಇಟ್ಟುಕೊಂಡಿರುವ ಜೂ. ಎನ್​ಟಿಆರ್​, ಅವರಿಂದ ಒಂದಷ್ಟು ವಿಚಾರಗಳನ್ನು ಕಲಿತಿದ್ದಾರೆ. ಸಿನಿಮಾಗೆ ವಿಎಫ್​ಎಕ್ಸ್ ಕೆಲಸಗಳು ಹೆಚ್ಚಿದ್ದರೆ ಅದಕ್ಕೆ ದೊಡ್ಡ ಬಜೆಟ್ ಮೀಸಲಿಡಬೇಕು ಎಂಬುದನ್ನು ತಿಳಿದುಕೊಂಡಿದ್ದಾರೆ. ಈ ಕಾರಣದಿಂದಲೇ ಕೊರಟಾಲ ಶಿವ ಹಾಗೂ ಜೂನಿಯರ್ ಎನ್​ಟಿಆರ್ ಅವರು ‘ದೇವರ’ ಚಿತ್ರದ ವಿಎಫ್​ಎಕ್ಸ್ ಬಜೆಟ್​ಗೆ ದೊಡ್ಡ ಮೊತ್ತ ಮೀಸಲಿಡಲು ನಿರ್ಧರಿಸಿದ್ದಾರೆ.

‘ದೇವರ’ ಚಿತ್ರದ ವಿಎಫ್​ಎಕ್ಸ್ ಕೆಲಸಗಳಿಗೆ 50 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಮೂಲಗಳ ಪ್ರಕಾರ ಈ ಸಿನಿಮಾದ ಬಜೆಟ್ ಸರಿಸುಮಾರು 150 ಕೋಟಿ ರೂಪಾಯಿ ಇದೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಸಿನಿಮಾದ ವಿಎಫ್​ಎಕ್ಸ್ ದೃಶ್ಯಗಳನ್ನು ನೋಡಲು ಅಭಿಮಾನಿಗಳು ಕಾದಿದ್ದಾರೆ.

ಇದನ್ನೂ ಓದಿ: ಎನ್​ಟಿಆರ್ ಹೆಸರಲ್ಲಿ 100 ರೂ. ನಾಣ್ಯ ಬಿಡುಗಡೆ; ವಿಶೇಷ ಕ್ಷಣ ಮಿಸ್ ಮಾಡಿಕೊಂಡ ಮೊಮ್ಮೊಗ ಜೂ.ಎನ್​ಟಿಆರ್

ಇಷ್ಟು ದೊಡ್ಡ ಬಜೆಟ್​ನ ಸಿನಿಮಾ ಮಾಡುವಾಗ ನಿರ್ಮಾಪಕರು ದೊಡ್ಡ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ. ‘ಆರ್​ಆರ್​ಆರ್​’ ಹಾಗೂ ‘ಆದಿಪುರುಷ್’ ಇವರೆಡೂ ಚಿತ್ರಗಳು ದೊಡ್ಡ ಬಜೆಟ್​ನಲ್ಲಿ ಸಿದ್ಧವಾಗಿವೆ. ‘ಆರ್​ಆರ್​ಆರ್’ ಚಿತ್ರ ಅಂದುಕೊಂಡ ರೀತಿಯಲ್ಲೇ ಗಳಿಕೆ ಮಾಡಿದ್ದರಿಂದ ನಿರ್ಮಾಪಕರು ಲಾಭ ಕಂಡರು. ಆದರೆ, ‘ಆದಿಪುರುಷ್’ ದೊಡ್ಡ ಬಜೆಟ್​ನಲ್ಲಿ ಸಿದ್ಧವಾದ ಹೊರತಾಗಿಯೂ ಕಳಪೆ ವಿಎಫ್​ಎಕ್ಸ್​ನಿಂದ ಹಿನ್ನಡೆ ಅನುಭವಿಸಿತು. ಈ ಕಾರಣಕ್ಕೆ ‘ದೇವರ’ ಸಿನಿಮಾ ನಿರ್ಮಾಪಕರು ತೆಗೆದುಕೊಳ್ಳುತ್ತಿರುವ ರಿಸ್ಕ್​ ಬಗ್ಗೆ ಅನೇಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಚಿತ್ರದ ಟೀಸರ್ ಅಥವಾ ಟ್ರೇಲರ್ ರಿಲೀಸ್ ಆದ ಬಳಿಕ ಸಿನಿಮಾ ಗುಣಮಟ್ಟದ ಬಗ್ಗೆ ತಿಳಿಯಲಿದೆ.

ಇದನ್ನೂ ಓದಿ: ಜೂನಿಯರ್ ಎನ್​ಟಿಆರ್ ಧರಿಸಿದ ಈ ವಾಚ್​ನ ಬೆಲೆ ಎಷ್ಟು ಕೋಟಿ ರೂಪಾಯಿ ಗೊತ್ತಾ?

‘ದೇವರ’ ಸಿನಿಮಾಗೆ ಜಾನ್ವಿ ಕಪೂರ್ ನಾಯಕಿ. ಅವರು ದಕ್ಷಿಣ ಭಾರತದಲ್ಲಿ ನಟಿಸುತ್ತಿರುವ ಮೊದಲ ಸಿನಿಮಾ ಇದು. ಅವರ ತಾಯಿ ಶ್ರೀದೇವಿ ಈ ಮೊದಲು ದಕ್ಷಿಣ ಭಾರತದಲ್ಲಿ ಗುರುತಿಸಿಕೊಂಡಿದ್ದರು. ಅದೇ ರೀತಿ ಜಾನ್ವಿ ಕೂಡ ಇಲ್ಲಿ ಮಿಂಚುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಈ ಚಿತ್ರಕ್ಕೆ ಸೈಫ್ ಅಲಿ ಖಾನ್ ಅವರು ವಿಲನ್. ಈ ಮೊದಲು ‘ಆದಿಪುರುಷ್’ ಚಿತ್ರದಲ್ಲಿ ಅವರು ರಾವಣನ ಪಾತ್ರ ಮಾಡಿದ್ದರು. ಯುವಸುಧಾ ಆರ್ಟ್ಸ್ ಹಾಗೂ ಎನ್​ಟಿಆರ್​ ಆರ್ಟ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ನಂದಮೂರಿ ಕಲ್ಯಾಣ್ ರಾಮ್ ಈ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ. ‘ಜೈಲರ್’ ಖ್ಯಾತಿಯ ಅನಿರುದ್ಧ್ ರವಿಚಂದರ್ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. 2024 ಏಪ್ರಿಲ್ 5ರಂದು ಸಿನಿಮಾ ಬಿಡುಗಡೆ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್