AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್​ಟಿಆರ್ ಹೆಸರಲ್ಲಿ 100 ರೂ. ನಾಣ್ಯ ಬಿಡುಗಡೆ; ವಿಶೇಷ ಕ್ಷಣ ಮಿಸ್ ಮಾಡಿಕೊಂಡ ಮೊಮ್ಮೊಗ ಜೂ.ಎನ್​ಟಿಆರ್

ತೆಲುಗಿನ ಖ್ಯಾತ ನಟ, ಮಾಜಿ ಸಿಎಂ ನಂದಮೂರಿ ತಾರಕ ರಾಮ ರಾವ್​​ ಸ್ಮರಣಾರ್ಥವಾಗಿ 100 ರೂಪಾಯಿ ಬೆಳ್ಳಿ ನಾಣ್ಯವನ್ನು ಅವರ ಹುಟ್ಟು ಹಬ್ಬದ ಪ್ರಯುಕ್ತ ಬಿಡುಗಡೆಗೊಳಿಸಲಾಗಿದೆ. ಆದರೆ ಜೂ. ಎನ್​ಟಿಆರ್ ಈ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಇದಕ್ಕೆ ಕಾರಣ ಏನು ಎಂಬುದು ಈಗ ರಿವೀಲ್ ಆಗಿದೆ.

ಎನ್​ಟಿಆರ್ ಹೆಸರಲ್ಲಿ 100 ರೂ. ನಾಣ್ಯ ಬಿಡುಗಡೆ; ವಿಶೇಷ ಕ್ಷಣ ಮಿಸ್ ಮಾಡಿಕೊಂಡ ಮೊಮ್ಮೊಗ ಜೂ.ಎನ್​ಟಿಆರ್
100 ರೂಪಾಯಿ ನಾಣ್ಯ ಬಿಡುಗಡೆ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Aug 29, 2023 | 11:25 AM

Share

ತೆಲುಗು ಖ್ಯಾತ ನಟ, ಆಂಧ್ರ ಪ್ರದೇಶದ ಮಾಜಿ ಮುಖ್ಯ ಮಂತ್ರಿ ನಂದಮೂರಿ ತಾರಕ ರಾಮರಾವ್ (Nandamuri Taraka Rama Rao) ಅವರು ನಮ್ಮೊಂದಿಗಿದ್ದಿದ್ದರೆ ಆಗಸ್ಟ್ 28ರಂದು 100ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು. ಅವರ ಸ್ಮರಣಾರ್ಥವಾಗಿ 100 ರೂಪಾಯಿ ಬೆಳ್ಳಿ ನಾಣ್ಯವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ನಂದಮೂರಿ ಕುಟುಂಬದ ಅನೇಕರು ಹಾಜರಿ ಹಾಕಿದ್ದರು. ಆದರೆ ಎನ್​ಟಿಆರ್ ಮೊಮ್ಮೊಗ ಜೂನಿಯರ್ ಎನ್​ಟಿಆರ್ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿರಲಿಲ್ಲ. ಇದಕ್ಕೆ ಕಾರಣ ಏನು ಎಂಬುದು ಈಗ ರಿವೀಲ್ ಆಗಿದೆ.

ಆಗಸ್ಟ್ 28ರಂದು ರಾಷ್ಟ್ರಪತಿ ಭವನದಲ್ಲಿ 100 ರೂಪಾಯಿ ನಾಣ್ಯ ಬಿಡುಗಡೆ ಮಾಡಲಾಗಿದೆ. ಈ ನಾಣ್ಯವು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. 44 ಮಿಲಿಮೀಟರ್ ಸುತ್ತಳತೆಯನ್ನು ಹೊಂದಿದ್ದು, ಶೇ.50 ಬೆಳ್ಳಿ, ಶೇ.40 ತಾಮ್ರ, ಶೇ.5ರಷ್ಟು ನಿಕ್ಕಲ್, ಶೇ.5 ಸತುವಿನಿಂದ ಮಾಡಲಾಗಿದೆ. ಈ ನಾಣ್ಯದಲ್ಲಿ ಅಶೋಕ ಚಕ್ರ, ಎನ್​​ಟಿಆರ್ ಚಿತ್ರ ಇದೆ. ‘ನಂದಮೂರಿ ತಾರಕ ರಾಮ ರಾವ್ ಶತ ಜಯಂತಿ’ ಎಂದು ಬರೆಯಲಾಗಿದೆ. 300ಕ್ಕೂ ಹೆಚ್ಚಿನ ಸಿನಿಮಾದಲ್ಲಿ ಎನ್​ಟಿಆರ್ ನಟಿಸಿದ್ದರು. ರಾಜಕೀಯದಲ್ಲೂ ಛಾಪು ಮೂಡಿಸಿದ್ದರು. ಈ ಕಾರಣದಿಂದ ಅವರ ಹೆಸರಲ್ಲಿ ನಾಣ್ಯ ರಿಲೀಸ್ ಮಾಡಲಾಯಿತು. ಈ ವಿಶೇಷ ಕ್ಷಣ ಕಣ್ತುಂಬಿಕೊಳ್ಳಲು ಜೂ.ಎನ್​ಟಿಆರ್​ಗೆ ಸಾಧ್ಯವಾಗಲಿಲ್ಲ.

ಎನ್​ಟಿಆರ್​ ಹೆಸರಲ್ಲಿ ನಾಣ್ಯ ಬಿಡುಗಡೆ ಮಾಡುವುದಾಗಿ ಆರ್​ಬಿಐ ಫೆಬ್ರವರಿಯಲ್ಲಿ ತಿಳಿಸಿತ್ತು. ಜೊತೆಗೆ ಜೂನಿಯರ್​ ಎನ್​ಟಿಆರ್ ಅವರಿಗೂ ಆಹ್ವಾನ ನೀಡಿತ್ತು. ಆದರೆ, ಅವರು ಆಗಮಿಸಲಿಲ್ಲ. ಮೂಲಗಳ ಪ್ರಕಾರ ಸಿನಿಮಾ ಶೂಟಿಂಗ್​​ಗೆ ಮೊದಲೇ ಡೇಟ್ ನೀಡಿದ್ದರು ಎನ್ನಲಾಗಿದೆ. ಈ ಕಾರಣಕ್ಕೆ ಅವರಿಗೆ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ ಎನ್ನಲಾಗಿದೆ.

ನಾಣ್ಯ ಬಿಡುಗಡೆ ಸಂದರ್ಭದ ಫೋಟೋನ ರಾಷ್ಟ್ರಪತಿ ದ್ರೌಪದಿ ಮುರ್ಮು ಹಂಚಿಕೊಂಡಿದ್ದಾರೆ. ‘ಮಾಜಿ ಮುಖ್ಯಮಂತ್ರಿ ನಂದಮೂರಿ ತಾರಕ ರಾಮ ರಾವ್ ಅವರ ಸ್ಮರಣಾರ್ಥವಾಗಿ ನಾಣ್ಯವನ್ನು ಬಿಡುಗಡೆ ಮಾಡಲಾಗಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಜೂನಿಯರ್ ಎನ್​ಟಿಆರ್ ಧರಿಸಿದ ಈ ವಾಚ್​ನ ಬೆಲೆ ಎಷ್ಟು ಕೋಟಿ ರೂಪಾಯಿ ಗೊತ್ತಾ?

ಜೂನಿಯರ್ ಎನ್​ಟಿಆರ್ ಅವರು ‘ದೇವರ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ. ಬಾಲಿವುಡ್​ನ ಜಾನ್ವಿ ಕಪೂರ್, ಸೈಫ್ ಅಲಿ ಖಾನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಕಾರಣಾಂತರಗಳಿಂದ ವಿಳಂಬ ಆಯಿತು. ಈಗ ಸಿನಿಮಾ ಪೂರ್ಣಗೊಳಿಸಲೇಬೇಕಾದ ಅನಿವಾರ್ಯತೆ ಇರುವುದರಿಂದ ಜೂನಿಯರ್ ಎನ್​ಟಿರ್ ಶೂಟಿಂಗ್​ನಲ್ಲಿ ಭಾಗಿ ಆಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಈ ರಾಶಿಯವರಿಗೆ ಆರು ಗ್ರಹಗಳ ಶುಭಫಲ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ
ಈ ರಾಶಿಯವರಿಗೆ ಆರು ಗ್ರಹಗಳ ಶುಭಫಲ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ
ಬೀದಿ ನಾಯಿಯನ್ನು ಉಳಿಸಲು ಹೋಗಿ 17 ವರ್ಷದ ಸ್ಕೂಟಿ ಸವಾರ ಸಾವು
ಬೀದಿ ನಾಯಿಯನ್ನು ಉಳಿಸಲು ಹೋಗಿ 17 ವರ್ಷದ ಸ್ಕೂಟಿ ಸವಾರ ಸಾವು
ಪಾಕಿಸ್ತಾನದಲ್ಲಿ ಭಾರೀ ಪ್ರವಾಹ; 116 ಸಾವು, 253 ಜನರಿಗೆ ಗಾಯ
ಪಾಕಿಸ್ತಾನದಲ್ಲಿ ಭಾರೀ ಪ್ರವಾಹ; 116 ಸಾವು, 253 ಜನರಿಗೆ ಗಾಯ
ಮನೆಯಂಗಳಕ್ಕೆ ಉರುಳಿ ಬಂದ ಕಲ್ಲು, ಮಣ್ಣು ಮತ್ತು ಗಿಡಗಳು
ಮನೆಯಂಗಳಕ್ಕೆ ಉರುಳಿ ಬಂದ ಕಲ್ಲು, ಮಣ್ಣು ಮತ್ತು ಗಿಡಗಳು
ಪಾಟ್ನಾದ ಆಸ್ಪತ್ರೆಗೆ ದಾಖಲಾಗಿದ್ದ ಕೊಲೆ ಆರೋಪಿಯನ್ನು ಶೂಟ್ ಮಾಡಿ ಕೊಲೆ
ಪಾಟ್ನಾದ ಆಸ್ಪತ್ರೆಗೆ ದಾಖಲಾಗಿದ್ದ ಕೊಲೆ ಆರೋಪಿಯನ್ನು ಶೂಟ್ ಮಾಡಿ ಕೊಲೆ
ಶ್ರೀರಾಮುಲು ಮಾತುಗಳಲ್ಲಿ ಸ್ಪಷ್ಟತೆಯ ಕೊರತೆ, ಮಾತುಗಳಲ್ಲಿ ಗೊಂದಲ
ಶ್ರೀರಾಮುಲು ಮಾತುಗಳಲ್ಲಿ ಸ್ಪಷ್ಟತೆಯ ಕೊರತೆ, ಮಾತುಗಳಲ್ಲಿ ಗೊಂದಲ
3 ನಿಮಿಷಗಳ ವಿಡಿಯೋದಲ್ಲಿ ಕೊಹ್ಲಿ ಏನು ಹೇಳಿದ್ದಾರೆ? ನೀವೇ ನೋಡಿ
3 ನಿಮಿಷಗಳ ವಿಡಿಯೋದಲ್ಲಿ ಕೊಹ್ಲಿ ಏನು ಹೇಳಿದ್ದಾರೆ? ನೀವೇ ನೋಡಿ
ಬಿಬಿಎಂಪಿಯನ್ನು 5 ಪಾಲಿಕೆಗಳನ್ನಾಗಿ ವಿಂಗಡಿಸಲು ನಿರ್ಧರಿಸಲಾಗಿದೆ: ಶಿವಕುಮಾರ
ಬಿಬಿಎಂಪಿಯನ್ನು 5 ಪಾಲಿಕೆಗಳನ್ನಾಗಿ ವಿಂಗಡಿಸಲು ನಿರ್ಧರಿಸಲಾಗಿದೆ: ಶಿವಕುಮಾರ
ರವಿಚಂದ್ರನ್ ಅವರನ್ನು ಅಳುವಂತೆ ಮಾಡಿದ ಏಕೈಕ ಸಿನಿಮಾ ಇದು
ರವಿಚಂದ್ರನ್ ಅವರನ್ನು ಅಳುವಂತೆ ಮಾಡಿದ ಏಕೈಕ ಸಿನಿಮಾ ಇದು
ಸೇತುವೆ ಲೋಕಾರ್ಪಣೆಗೆ ಬರಬೇಡವೆಂದು ಸಿಎಂಗೆ ಬಿಎಸ್​ವೈ ಹೇಳಿದ್ದರು: ಯತ್ನಾಳ್
ಸೇತುವೆ ಲೋಕಾರ್ಪಣೆಗೆ ಬರಬೇಡವೆಂದು ಸಿಎಂಗೆ ಬಿಎಸ್​ವೈ ಹೇಳಿದ್ದರು: ಯತ್ನಾಳ್