ವಿಜಯ್ ರಾಘವೇಂದ್ರ ‘ಕದ್ದ ಚಿತ್ರ’ದ ರಿಲೀಸ್ ದಿನಾಂಕ ಘೋಷಣೆ; ನೋವಿನಲ್ಲೂ ಮರೆತಿಲ್ಲ ಕರ್ತವ್ಯ

ಆಗಸ್ಟ್ 25ರಂದು ‘ಕದ್ದ ಚಿತ್ರ’ ರಿಲೀಸ್ ಆಗಬೇಕಿತ್ತು. ಆದರೆ, ವಿಜಯ್ ನೋವಿನಲ್ಲಿ ಇದ್ದಿದ್ದರಿಂದ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಯಿತು. ಈಗ ಹೊಸ ರಿಲೀಸ್ ದಿನಾಂಕ ಅನೌನ್ಸ್ ಆಗಿದೆ. ಸೆಪ್ಟೆಂಬರ್ 8ರಂದು ‘ಕದ್ದ ಚಿತ್ರ’ ತೆರೆಗೆ ಬರುತ್ತಿದೆ. ಈ ಬಗ್ಗೆ ತಂಡ ಮಾಹಿತಿ ಹಂಚಿಕೊಂಡಿದೆ.

ವಿಜಯ್ ರಾಘವೇಂದ್ರ ‘ಕದ್ದ ಚಿತ್ರ’ದ ರಿಲೀಸ್ ದಿನಾಂಕ ಘೋಷಣೆ; ನೋವಿನಲ್ಲೂ ಮರೆತಿಲ್ಲ ಕರ್ತವ್ಯ
ಕದ್ದ ಚಿತ್ರದ ಪೋಸ್ಟರ್
Follow us
ರಾಜೇಶ್ ದುಗ್ಗುಮನೆ
|

Updated on:Sep 01, 2023 | 12:58 PM

ವಿಜಯ್ ರಾಘವೇಂದ್ರ (Vijay Raghavendra) ಅವರ ಬಾಳಲ್ಲಿ ಈ ತಿಂಗಳು ಕಹಿ ಘಟನೆ ಸಂಭವಿಸಿತು. ಅವರ ಪತ್ನಿ ಸ್ಪಂದನಾ ಅವರು ಆಗಸ್ಟ್ 6ರಂದು ಥೈಲ್ಯಾಂಡ್​ನಲ್ಲಿ ಮೃತಪಟ್ಟರು. ಈಗ ಅವರು ಪತ್ನಿಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಆದರೂ ಜೀವನ ಸಾಗಲೇಬೇಕು. ವಿಜಯ್ ರಾಘವೇಂದ್ರ ನಟನೆಯ ‘ಕದ್ದ ಚಿತ್ರ’ ಸಿನಿಮಾ ಆಗಸ್ಟ್ 25ರಂದು ರಿಲೀಸ್ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ರಿಲೀಸ್​ ದಿನಾಂಕ ಮುಂದಕ್ಕೆ ಹೋಗಿತ್ತು. ಈಗ ತಂಡದವರು ಹೊಸ ಬಿಡುಗಡೆ ದಿನಾಂಕ ತಿಳಿಸಿದ್ದಾರೆ. ನೋವಿನಲ್ಲೂ ವಿಜಯ್ ಸಿನಿಮಾ ಪ್ರಚಾರದಲ್ಲಿ ಭಾಗಿ ಆಗುತ್ತಿದ್ದಾರೆ.

ವಿಜಯ್ ರಾಘವೇಂದ್ರ ಅವರು ಭಿನ್ನ ಸಿನಿಮಾಗಳನ್ನು ಮಾಡುತ್ತಿದ್ದಾರೆ. ವಿಶೇಷ ಕಥೆಗಳನ್ನು ಆಯ್ಕೆ ಮಾಡಿಕೊಂಡು ನಟಿಸುತ್ತಾರೆ. ಇತ್ತೀಚೆಗೆ ಅವರ ನಟನೆಯ ‘ರಾಘು’ ಸಿನಿಮಾ ರಿಲೀಸ್ ಆಯಿತು. ಚಿತ್ರದುದ್ದಕ್ಕೂ ತೆರೆಮೇಲೆ ಕಾಣಿಸುವ ಏಕೈಕ ವ್ಯಕ್ಯಿ ಎಂದರೆ ಅದು ಅವರು ಮಾತ್ರ. ಈಗ ಅವರು ‘ಕದ್ದ ಚಿತ್ರ’ ಆಯ್ಕೆ ಮಾಡಿಕೊಂಡಿದ್ದಾರೆ. ಇದರಲ್ಲೂ ಅವರು ಭಿನ್ನ ಪಾತ್ರ ಮಾಡಿದ್ದಾರೆ. ಬರಹಗಾರನ ಪಾತ್ರದಲ್ಲಿ ಅವರು ನಟಿಸಿದ್ದಾರೆ.

ಆಗಸ್ಟ್ 25ರಂದು ‘ಕದ್ದ ಚಿತ್ರ’ ರಿಲೀಸ್ ಆಗಬೇಕಿತ್ತು. ಆದರೆ, ವಿಜಯ್ ನೋವಿನಲ್ಲಿ ಇದ್ದಿದ್ದರಿಂದ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಯಿತು. ಈಗ ಹೊಸ ರಿಲೀಸ್ ದಿನಾಂಕ ಅನೌನ್ಸ್ ಆಗಿದೆ. ಸೆಪ್ಟೆಂಬರ್ 8ರಂದು ‘ಕದ್ದ ಚಿತ್ರ’ ತೆರೆಗೆ ಬರುತ್ತಿದೆ. ಸುಹಾಸ್ ಕೃಷ್ಣ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ವಿಜಯ್ ರಾಘವೇಂದ್ರ, ನಮ್ರತಾ ಸುರೇಂದ್ರನಾಥ್, ರಾಘು ಶಿವಮೊಗ್ಗ ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ನಡೆದ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ವಿಜಯ್ ರಾಘವೇಂದ್ರ ಹಾಜರಿ ಹಾಕಿ ಕಣ್ಣೀರು ಹಾಕಿದ್ದರು.

ಇದನ್ನೂ ಓದಿ: ‘ಮರೆಯದೆ ತೊರೆಯದೆ ಎದೆಗೊತ್ತಿ ಪ್ರೀತಿಸುವೆ’; ವಿವಾಹ ವಾರ್ಷಿಕೋತ್ಸವಕ್ಕೆ ಭಾವುಕ ವಿಡಿಯೋ ಹಂಚಿಕೊಂಡ ವಿಜಯ್ ರಾಘವೇಂದ್ರ

ಸದ್ಯ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿವೆ. ರಿಲೀಸ್ ಆದ ಎಲ್ಲಾ ಚಿತ್ರಗಳು ಉತ್ತಮ ಬೆಳೆ ತೆಗೆಯುತ್ತಿವೆ. ‘ಕದ್ದ ಚಿತ್ರ’ ಕೂಡ ಒಳ್ಳೆಯ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಸೆಪ್ಟೆಂಬರ್ 7ರಂದು ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ ಕೂಡ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಜೊತೆ ‘ಕದ್ದ ಚಿತ್ರ’ ಸ್ಪರ್ಧೆ ಮಾಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:06 pm, Tue, 29 August 23

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್