‘ಇನ್ಮುಂದೆ ಸಿನಿಮಾ ಲೇಟ್ ಮಾಡಲ್ಲ’: ಭರವಸೆ ನೀಡಿದ ನಟ ಧ್ರುವ ಸರ್ಜಾ
ಸ್ಟಾರ್ ನಟರ ಸಿನಿಮಾಗಳ ಬಿಡುಗಡೆ ತಡ ಆಗಿದ್ದರಿಂದ ಚಿತ್ರಮಂದಿರಗಳಿಗೆ ಜನರು ಬರುತ್ತಿಲ್ಲ ಎಂಬ ವಾದ ಇದೆ. ಈ ಬಗ್ಗೆ ಧ್ರುವ ಸರ್ಜಾ ಅವರಿಗೆ ಪ್ರಶ್ನೆ ಕೇಳಲಾಗಿದೆ. ‘ಮಾರ್ಟಿನ್’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ. ಅಕ್ಟೋಬರ್ 11ರಂದು ‘ಮಾರ್ಟಿನ್’ ಬಿಡುಗಡೆ ಆಗಲಿದೆ ಎಂದು ಅವರು ಹೇಳಿದ್ದಾರೆ.
ಎ.ಪಿ. ಅರ್ಜುನ್ ನಿರ್ದೇಶನದ ‘ಮಾರ್ಟಿನ್’ (Martin) ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಹೀರೋಗಳ ಸಿನಿಮಾ ಬಿಡುಗಡೆ ಆಗುವುದು ವಿಳಂಬ ಆಗುತ್ತಿದೆ. ಆದ್ದರಿಂದ ಚಿತ್ರಮಂದಿರಗಳು ಮುಚ್ಚುವ ಹಂತಕ್ಕೆ ಬಂದಿವೆ ಎಂಬುದು ಕೆಲವರ ವಾದ. ಅದಕ್ಕೆ ಧ್ರುವ ಸರ್ಜಾ (Dhruva Sarja) ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಅದನ್ನೆಲ್ಲ ಬಗೆಹರಿಸಲು ವಾಣಿಜ್ಯ ಮಂಡಳಿ ಇದೆ. ಆ ವೇದಿಕೆಯಲ್ಲಿ ಅದನ್ನು ಮಾತನಾಡೋಣ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ. ದೂರದಿಂದ ನೋಡಿದರೆ ಎಲ್ಲವೂ ಚೆನ್ನಾಗಿ ಕಾಣಿಸುತ್ತದೆ. ಹತ್ತಿರದಿಂದ ನೋಡಿದಾಗ ಕಲ್ಲುಗಳು ಕಾಣಿಸುತ್ತವೆ. ನಮ್ಮದೇ ಆದಂತಹ ಸಮಸ್ಯೆಗಳು ಇವೆ. ಸಿನಿಮಾಗಳು ತಡ ಆಗೋದಕ್ಕೆ ಕಾರಣಗಳಿವೆ. ಅವರ ದೃಷ್ಟಿಕೋನದಲ್ಲಿ ನೋಡಿದರೆ ನಾವು ಇಷ್ಟು ತಡ ಮಾಡುವುದು ತಪ್ಪು. ನಮ್ಮ ದೃಷ್ಟಿಕೋನದಲ್ಲಿ ನೋಡಿದಾಗ ಕಾರಣಗಳು ಹುಟ್ಟಿಕೊಳ್ಳುತ್ತವೆ. ಇನ್ಮುಂದೆ ಲೇಟ್ ಮಾಡಲ್ಲ. ಫಾಸ್ಟ್ ಆಗಿ ಸಿನಿಮಾ ಮಾಡ್ತೀನಿ. ಧನ್ಯವಾದಗಳು’ ಎಂದಿದ್ದಾರೆ ನಟ ಧ್ರುವ ಸರ್ಜಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.