ಚಾಲಕನ ನಿಯಂತ್ರಣ ತಪ್ಪಿ ಬೇಕರಿಗೆ ಡಿಕ್ಕಿ ಹೊಡೆದ ಲಾರಿ; ಅಂಗಡಿಯ ಸ್ಥಿತಿ ಹೇಗಾಗಿದೆ ನೋಡಿ

Updated on: Sep 11, 2025 | 11:22 AM

ಲಾರಿಯೊಂದು ರಸ್ತೆ ಬದಿಯ ಬೇಕರಿಗೆ ಏಕಾಏಕಿ ನುಗ್ಗಿದ ಘಟನೆಯೊಂದು ಇಂದು ಮುಂಜಾನೆ 4.30 ರ ಸುಮಾರಿಗೆ ಮಲ್ಲೇಶ್ವರಂನ ಲಿಂಕ್‌ ರಸ್ತೆಯಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಲಾರಿ ಬೇಕರಿಗೆ ನುಗ್ಗಿದ್ದು, ಈ ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ ಮಲ್ಲೇಶ್ವರಂ ಸಂಚಾರ ಪೊಲೀಸರು ಸ್ಥಳಕ್ಕಾಗಮಿಸಿ ಲಾರಿಯನ್ನು ತೆರವು ಮಾಡಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್‌ 11: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ರಸ್ತೆ ಬದಿಯಿದ್ದಂತಹ ಬೇಕರಿಗೆ ಡಿಕ್ಕಿ ಹೊಡೆದಿರುವಂತಹ ಘಟನೆ ಮಲ್ಲೇಶ್ವರಂನ ಲಿಂಕ್‌ ರಸ್ತೆಯಲ್ಲಿ ನಡೆದಿದೆ. ಬೆಳ್ಳಂಬೆಳಗ್ಗೆ 4.30 ರ ಸುಮಾರಿಗೆ ಈ ಘಟನೆ ನಡೆಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಲಾರಿ ಫುಟ್‌ಪಾತ್‌ ಹತ್ತಿ ಕಾಂಡಿಮೆಂಟ್ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿ ಹೊಡೆದ ಪರಿಣಾಮ ಅಂಗಡಿಯ ಶಟರ್‌ ಮತ್ತು ಗೋಡೆ ಹಾನಿಗೊಳಗಾಗಿದ್ದು,  ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ನಂತರ  ಮಲ್ಲೇಶ್ವರಂ ಸಂಚಾರ  ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಲಾರಿಯನ್ನು ತೆರವು ಮಾಡಿದ್ದಾರೆ. ಸದ್ಯ ಲಾರಿ ಚಾಲಕನ ಠಾಣೆಗೆ ಹಾಜರಾಗಿದ್ದು, ಘಟನೆಯ ಬಗ್ಗೆ ಸಂಪೂರ್ಣ ವಿವರಣೆ ನೀಡಿದ್ದಾನೆ ಎಂದು ಹೇಳಲಾಗುತ್ತಿದೆ.  ಈ ಘಟನೆಯಿಂದಾಗಿ ಬೇಕರಿ ಮಾಲೀಕನಿಗೆ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Sep 11, 2025 11:21 AM