ಬಾಗಿಲು ಒಡೆದಿಲ್ಲ, ಲಾಕ್ ಮುರಿದಿಲ್ಲ: ಚಿನ್ನಾಭರಣ ದೋಚಿದ ಖತರ್ನಾಕ್ ಕಳ್ಳ
ಬಾಗಲಗುಂಟೆಯಲ್ಲಿ ನಡೆದ ಭಾರೀ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಲಾಗಿದೆ. ಕಳ್ಳನು ಯಾವುದೇ ಬಾಗಿಲು ಅಥವಾ ಲಾಕ್ ಒಡೆಯದೆ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾನೆ. ಈ ಘಟನೆಯ ಸಿಸಿಟಿವಿ ದೃಶ್ಯಗಳು ಲಭ್ಯವಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 11: ನಗರದಲ್ಲಿ ಮನೆಗಳ್ಳ ಆಕ್ಟಿವ್ ಆಗಿದ್ದಾನೆ. ಬಾಗಿಲು ಒಡೆದಿಲ್ಲ, ಲಾಕ್ ಮುರಿದಿಲ್ಲ, ಆದರೂ ಖತರ್ನಾಕ್ ಕಳ್ಳನಿಂದ ಕಳ್ಳತನ (theft) ಮಾಡಲಾಗಿದೆ. ಮಗನ ಮದುವೆಗಾಗಿ ಮನೆಯಲ್ಲಿಟ್ಟಿದ್ದ 45 ಲಕ್ಷ ರೂ ಬೆಲೆ ಬಾಳುವ ಚಿನ್ನಾಭರಣ, ಮೂರು ಲಕ್ಷ ರೂ ನಗದು ದೋಚಿ ಪರಾರಿ ಆಗಿರುವಂತಹ ಘಟನೆ ಬಾಗಲಗುಂಟೆ ರಾಮಯ್ಯ ಬಡಾವಣೆಯಲ್ಲಿ ನಡೆದಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos

