ಕೆಲಸಕ್ಕೆ ಹೋಗು ಎಂದು ಬುದ್ಧಿ ಮಾತು ಹೇಳಿದ ತಂದೆಯನ್ನೇ ಕೊಲೆಗೈದ ಪುತ್ರ
ಹೆತ್ತ ತಂದೆಯನ್ನೇ ಮಗನೊಬ್ಬ ಕೊಲೆಗೈದ ಆಘಾತಕಾರಿ ಘಟನೆ ಬೆಂಗಳೂರಿನ ದಾಸರಹಳ್ಳಿಯಲ್ಲಿ ನಡೆದಿದೆ. ಕೆಲಸಕ್ಕೆ ಹೋಗು ಎಂದು ಹೇಳಿದ್ದಕ್ಕೆ ಪಾಪಿ ಮಗ ತಂದೆಯನ್ನು ಕೊಲೆ ಮಾಡಿ, ನಂತರ ಇದನ್ನು ಆತ್ಮಹತ್ಯೆ ಎಂಬಂತೆ ಬಿಂಬಿಸಿದ್ದನು. ಆದರೆ ಇದೀಗ ಮಗ ಮನೋಜ್‌ನ ಹೀನ ಕೃತ್ಯ ಪೊಲೀಸರ ಮುಂದೆ ಬಟಾಬಯಲಾಗಿದೆ.
ಬೆಂಗಳೂರು, ಸೆಪ್ಟೆಂಬರ್ 21: ತಂದೆ ತಾಯಿ ಏನೇ ಹೇಳಿದ್ರೂ ಅದನ್ನು ಮಕ್ಕಳ ಒಳ್ಳೆಯದಕ್ಕೆಯೇ ಹೇಳುತ್ತಾರೆ. ಹೀಗೆ ಬುದ್ಧಿವಾದ ಹೇಳಿದಾಗ ಮಕ್ಕಳು ಕೋಪ ಮಾಡಿಕೊಳ್ಳುವುದು ಇದೆ. ಅದೇ ರೀತಿ ಇಲ್ಲೊಬ್ಬ ಯುವಕ ಕೆಲಸಕ್ಕೆ ಹೋಗು ಎಂದು ಬುದ್ಧಿವಾದ ಹೇಳಿದ ಹೆತ್ತ ತಂದೆಯನ್ನೇ ಕೊಲೆಗೈದಿದ್ದಾನೆ. ತಂದೆಯನ್ನು ಕೊಂದು ಇದು ಆತ್ಮಹತ್ಯೆ ಎಂದು ಬಿಂಬಿಸಿ ನಾಟಕವಾಡಿದ್ದ ಜೊತೆಗೆ ತಂದೆ ಶವದ ಮುಂದೆ ಕುಳಿತು ಈ ಪಾಪಿ ಮಗ ಕಣ್ಣೀರನ್ನೂ ಹಾಕಿದ್ದನು. ಸೆಪ್ಟೆಂಬರ್ 03 ರಂದು ದಾಸರಹಳ್ಳಿಯಲ್ಲಿ ಈ ಘಟನೆ ನಡೆದಿತ್ತು. ಆದರೆ ಇದೀಗ ಪುತ್ರ ಮನೋಜ್‌ನ ನೀಚ ಕೃತ್ಯ ಪೊಲೀಸರ ಮುಂದೆ ಬಯಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

