ಎಷ್ಟು ಲಕ್ಷುರಿಯಾಗಿದೆ  ನೋಡಿ ಬೆಂಗಳೂರಲ್ಲಿ ತಲೆ ಎತ್ತಿದೆ ಮಹೇಶ್ ಬಾಬು ಮಲ್ಟಿಪ್ಲೆಕ್ಸ್ 

Updated on: Jan 16, 2026 | 11:27 AM

ಮಹೇಶ್ ಬಾಬು ಅವರ ಹೊಸ ಮಲ್ಟಿಪ್ಲೆಕ್ಸ್ ಬೆಂಗಳೂರಿನಲ್ಲಿ ತಲೆ ಎತ್ತಿದೆ. ಏಷ್ಯನ್ ಮಹೇಶ್ ಬಾಬು ಸಿನಿಮಾಸ್ ಅಥವಾ ಎಎಂಬಿ ಸಿನಿಮಾಸ್ ಗಾಂಧಿ ನಗರದಲ್ಲಿ ಆರಂಭ ಆಗಿದೆ. ಈ ಮಲ್ಟಿಪ್ಲೆಕ್ಸ್ ಸಾಕಷ್ಟು ಅದ್ದೂರಿಯಾಗಿದೆ.ಇಂದಿನಿಂದ ಇದು ಕಾರ್ಯಾರಂಭ ಮಾಡುತ್ತಿದೆ. ಆ ಬಗ್ಗೆ ಇಲ್ಲಿದೆ ವಿವರ. 

ಮಹೇಶ್ ಬಾಬು ಅವರ ಎಎಂಬಿ ಸಿನಿಮಾಸ್ ಬೆಂಗಳೂರಲ್ಲಿ ಇಂದಿನಿಂದ (ಜನವರಿ 16) ಕಾರ್ಯಾರಾಂಭ ಆರಂಭಿಸಿದೆ. ಬೆಂಗಳೂರಿನ ಕಪಾಲಿ ಚಿತ್ರಮಂದಿರದ ಜಾಗದಲ್ಲೇ ಇದು ತಲೆ ಎತ್ತಿದೆ. ಬೆಂಗಳೂರಿನ ಗಾಂಧಿ ನಗರದಲ್ಲಿರುವ ಕಪಾಲಿ ಮಾಲ್​​​ನಲ್ಲಿ ಈ ಮಲ್ಟಿಪ್ಲೆಕ್ಸ್  ಇದೆ. 9 ಪರದೆಗಳನ್ನು ಇದು ಹೊಂದಿದೆ.ಈ ಚಿತ್ರಮಂದಿರ ಸಾಕಷ್ಟು ಅದ್ದೂರಿಯಾಗಿದೆ. ಥಿಯೇಟರ್​​ನ ಝಲಕ್ ಇಲ್ಲಿದೆ.

ಸ್ಕ್ರೀನ್ 6 ವಿಶೇಷವಾಗಿದ್ದು, ಇದು ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾ ಪರದೆಯಾಗಿದೆ. ಇದು ಕ್ರಿಸ್ಟಿ 6K ಡಾಲ್ಬಿ ವಿಷನ್ ಪ್ರೊಜೆಕ್ಟರ್ ಮತ್ತು ಇಮ್ಮರ್ಸಿವ್ ಸೌಂಡ್ ವ್ಯವಸ್ಥೆಯನ್ನು ಹೊಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.