ಬೆಂಗಳೂರಿನ ರಸ್ತೆ ಗುಂಡಿ ಬಗ್ಗೆ ವ್ಯಂಗ್ಯ ಚಿತ್ರ ರಿಲೀಸ್‌ ಮಾಡಿ ಕಿಡಿ ಕಾರಿದ ಬಿಜೆಪಿ

Updated on: Sep 30, 2025 | 7:14 PM

ಇತ್ತೀಚಿನ ದಿನಗಳಲ್ಲಿ ಬ್ರ್ಯಾಂಡ್‌ ಬೆಂಗಳೂರು ರಸ್ತೆ ಗುಂಡಿಯ ಗದ್ದಲದ ಕಾರಣದಿಂದಲೇ ಸಖತ್‌ ಸುದ್ದಿಯಲ್ಲಿದೆ. ಈ ಸಮಸ್ಯೆಯ ಬಗ್ಗೆ ಭಾರೀ ಆಕ್ರೋಶವೂ ವ್ಯಕ್ತವಾಗಿತ್ತು. ಕೆಲ ದಿನಗಳ ಹಿಂದೆಯಷ್ಟೆ ಸರ್ಕಾರ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡ್ತಿಲ್ಲ ಎಂದು ಪ್ರತಿಭಟನೆಯನ್ನೂ ಮಾಡಿತ್ತು. ಇದೀಗ ಬೆಂಗಳೂರಿನ ರಸ್ತೆ ಗುಂಡಿ ಬಗ್ಗೆ ವ್ಯಂಗ್ಯ ಚಿತ್ರ ಬಿಡುಗಡೆ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಬೆಂಗಳೂರು, ಸೆಪ್ಟೆಂಬರ್‌ 30: ಸಿಲಿಕಾನ್‌ ಸಿಟಿ ಬೆಂಗಳೂರು ರಸ್ತೆ ಗುಂಡಿಗಳ (potholes) ಗದ್ದಲದ ಕಾರಣದಿಂದಲೇ ಸುದ್ದಿಯಲ್ಲಿದೆ. ರಸ್ತೆ ಗುಂಡಿಗಳ ಕಾರಣದಿಂದ ವಾಹನ ಸವಾರರಿಗೆ ಸಂಚರಿಸಲು ತೀವ್ರ ತೊಂದರೆಯುಂಟಾಗುತ್ತೆ ಎಂಬ ಆಕ್ರೋಶ ವ್ಯಕ್ತವಾದ ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಗುಂಡಿ ಮುಚ್ಚುವಂತಹ ಕಾರ್ಯವನ್ನು ಮಾಡುತ್ತಿದೆ. ಈ ನಡುವೆ ಮೊನ್ನೆಯಷ್ಟೆ ಬಿಜೆಪಿ ನಾಯಕರುಗಳು ತಾವೇ ರಸ್ತೆಗುಂಡಿ ಮುಚ್ಚಿ ಸರ್ಕಾರದ ವಿರುದ್ಧ ವಿಭಿನ್ನ ಪ್ರತಿಭಟನೆಯನ್ನು ಮಾಡಿದ್ದರು. ಇದೀಗ ಬಿಜೆಪಿ ಬೆಂಗಳೂರಿನ ರಸ್ತೆಗುಂಡಿ ಬಗ್ಗೆ ವಿಧಾನಸೌಧದಲ್ಲಿ ವ್ಯಂಗ್ಯ ಚಿತ್ರವನ್ನು ಬಿಡುಗಡೆ ಮಾಡಿದೆ. ವ್ಯಂಗ್ಯ ಚಿತ್ರ ಪ್ರದರ್ಶಿಸಿ ವಿಪಕ್ಷ ನಾಯಕ ಆರ್‌. ಅಶೋಕ್‌ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ