ಈ ರೀತಿ ಮಾಡೋದು ತಪ್ಪಲ್ವಾ; ಬೆಂಗಳೂರು-ಮೈಸೂರು ಬಸ್ ಟಿಕೆಟ್ ದರ ಏರಿಕೆಗೆ ಪ್ರಯಾಣಿಕರ ಆಕ್ರೋಶ
ಮೈಸೂರಲ್ಲಿ ದಸರಾ ಸಂಭ್ರಮ ನಡೆಯುತ್ತಿದ್ದು, ಇದೇ ವೇಳೆಯಲ್ಲಿ ಕೆಎಸ್‌ಆರ್‌ಟಿಸಿ ನಿಗಮವು ಬೆಂಗಳೂರು ಟು ಮೈಸೂರು ಹೋಗುವ ಬಸ್ ದರವನ್ನು ಏರಿಕೆ ಮಾಡಿದೆ. ಈ ಮೂಲಕ ಮೈಸೂರು ದಸರಾ ನೋಡಲೆಂದು ಹೊರಟವರಿಗೆ ಕೆಎಸ್‌ಆರ್‌ಟಿಸಿ ಶಾಕ್ ನೀಡಿದೆ. ಸರ್ಕಾರದ ಈ ನೀತಿಯಿಂದಾಗಿ ಪ್ರಯಾಣಿಕರು ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 30: ನಾಡ ಹಬ್ಬ ದಸರಾ ಬಲು ವಿಜೃಂಭನೆಯಿಂದ ನಡೆಯುತ್ತಿದ್ದು, ಈ ಸೊಬಗನ್ನು ಕಣ್ತುಂಬಲೆಂದು ಜನ ಮೈಸೂರಿಗೆ ಹೋಗುತ್ತಿದ್ದಾರೆ. ಇಂಥಾ ಹೊತ್ತಲೇ ಕೆಎಸ್‌ಆರ್‌ಟಿಸಿ ಬಸ್ (bus ticket price hike) ಟಿಕೆಟ್ ದರ ಹೆಚ್ಚಳವಾಗಿದ್ದು, ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು ಬೆಂಗಳೂರು ಟು ಮೈಸೂರು ಹೋಗುವ ಎಲ್ಲಾ ಮಾದರಿಯ ಕೆಎಸ್‌ಆರ್‌ಟಿಸಿ ಬಸ್‌ಗಳ ಟಿಕೆಟ್ ದರವನ್ನು ಸುಮಾರು 20 ರೂ. ಹೆಚ್ಚಿಸಿದೆ. ಹೆಣ್ಮಕ್ಳಿಗೆ ಫ್ರೀ ಕೊಟ್ಟು ಇದೀಗ ಗಂಡಸರಿಗೆ ಟಿಕೆಟ್ ಬೆಲೆ ಜಾಸ್ತಿ ಮಾಡವ್ರೇ, ಇದೆಲ್ಲಾ ಮೋಸ ಎಂದು ಜನ ಆಕ್ರೋಶವನ್ನು ಹೊರ ಹಾಕಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 30, 2025 12:19 PM

