Assembly Polls: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗೆ ಸೇರಿದ ರೂ. 8.5 ಲಕ್ಷ ಮೌಲ್ಯದ ಪ್ರೆಶರ್ ಕುಕ್ಕರ್ ಗಳು ಜಪ್ತಿ

|

Updated on: Mar 30, 2023 | 2:16 PM

ಶಾಸಕರು ಕುಕ್ಕರ್ ಕಾರ್ಟನ್ ಗಳ ಮೇಲೆ ತಮ್ಮ ಫೋಟೋವಲ್ಲದೆ, ಪಕ್ಷದ ಪಿತಾಮಹ ಹೆಚ್ ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಫೋಟೋಗಳನ್ನೂ ಮುದ್ರಿಸಿದ್ದಾರೆ.

ಬೆಂಗಳೂರು: ದಾಸರಹಳ್ಳಿಯ ಜೆಡಿಎಸ್ ಅಭ್ಯರ್ಥಿ ಮತ್ತು ಹಾಲಿ ಶಾಸಕ ಆರ್ ಮಂಜುನಾಥ್ (R Manjunath) ಅವರ ಫೋಟೋ ಇರುವ ಸುಮಾರು ರೂ 8.5 ಲಕ್ಷ ಮೌಲ್ಯದ 612 ಪ್ರೆಶರ್ ಕುಕ್ಕರ್ ಗಳನ್ನು ಸಾಗಿಸುತ್ತಿದ್ದ ಮಿನಿ ಟ್ರಕ್ಕೊಂದನ್ನು ನಗರದ ರಾಜಗೋಪಾಲ ನಗರದ ಪೊಲೀಸ್ ಠಾಣೆಯಲ್ಲಿ ಇಂದು ಜಪ್ತಿ ಮಾಡಲಾಗಿದೆ. ಮಂಜುನಾಥ್​ಗೆ ಚುನಾವಣಾ ನೀತಿ ಸಂಹಿತೆ (MCC) ಜಾರಿಗೆ ಬಂದಿರೋದು ಗೊತ್ತಿಲ್ಲ ಅನಿಸುತ್ತೆ. ಶಾಸಕರು ಕುಕ್ಕರ್ ಕಾರ್ಟನ್ ಗಳ ಮೇಲೆ ತಮ್ಮ ಫೋಟೋವಲ್ಲದೆ, ಪಕ್ಷದ ಪಿತಾಮಹ ಹೆಚ್ ಡಿ ದೇವೇಗೌಡ (HD Devegowda) ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಫೋಟೋಗಳನ್ನೂ ಮುದ್ರಿಸಿದ್ದಾರೆ. ಮಂಜುನಾಥ ಫೋಟೋ ಕೆಳಗೆ ಸದಾ ನಿಮ್ಮ ಸೇವೆಯಲ್ಲಿ ಎಂಬ ಟ್ಯಾಗ್ ಲೈನ್ ಇದೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ