ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ರಸ್ತೆಗಳು ಅಧ್ವಾನ: ಟಿವಿ9 ರಿಯಾಲಿಟಿ ಚೆಕ್ನಲ್ಲಿ ಬಯಲು
ರಸ್ತೆ ಸರಿ ಇಲ್ಲ.. ಮಳೆ ಬಂದ್ರೆ ರಸ್ತೆ ಕೆರೆಯಂತಾಗುತ್ತೆ... ಹೆಜ್ಜೆ ಹೆಜ್ಜೆಗೂ ಗುಂಡಿಗಳೇ ರಾರಾಜಿಸ್ತಿವೆ.. ಎಲ್ಲೆಂದ್ರಲ್ಲಿ ಕಸ ಬಿದ್ದಿದೆ.. ಗಂಟೆಗಂಟಲೆ ಟ್ರಾಫಿಕ್ನಲ್ಲೇ ಸಿಲುಕಬೇಕು... ಇದ್ರಿಂದ ಐಟಿ ಉದ್ಯಮಿಗಳು ಕೆರಳಿದ್ರು... ಕೆಲವ್ರು ನಾವು ಬೆಂಗಳೂರು ಬಿಟ್ಟು ಹೊರ ಹೋಗ್ತೀವಿ ಅಂತ್ಲೂ ಹೇಳಿದ್ರು.. ಇದು ಸರ್ಕಾರ ಮತ್ತು ಉದ್ಯಮಿಗಳ ಮಧ್ಯೆ ಸಂಘರ್ಷಕ್ಕೂ ಕಾರಣವಾಗಿತ್ತು.
ಬೆಂಗಳೂರು, ಅಕ್ಟೋಬರ್ 21: ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ವಿಶೇಷವಾಗಿ ಐಟಿ ಕಂಪನಿಗಳು ಹೆಚ್ಚಿರುವ ಪ್ರದೇಶಗಳಲ್ಲಿ ರಸ್ತೆಗಳ ದುಸ್ಥಿತಿ ಹೇಳತೀರದಾಗಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ರಸ್ತೆಗಳು ಅಧ್ವಾನವಾಗಿದ್ದು, ಟಿವಿ9 ರಿಯಾಲಿಟಿ ಚೆಕ್ನಲ್ಲಿ ಅಸಲಿಯತ್ತು ಬಯಲಾಗಿದೆ. ಜೊತೆಗೆ ಬಯೋಕಾನ್ ಸಂಸ್ಥೆ ಸಂಪರ್ಕಿಸೋ ರಸ್ತೆ ಗುಂಡಿಮಯವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
